Thursday, July 2, 2026
Homeತಾಜಾ ಸುದ್ದಿಸಾರ್ವಜನಿಕ ಕುಂದು ಕೊರತೆ ಆಲಿಸಲು ಪ್ರಜಾ ಸೇವೆ ಇಲಾಖೆ ಸ್ಥಾಪನೆ

ಸಾರ್ವಜನಿಕ ಕುಂದು ಕೊರತೆ ಆಲಿಸಲು ಪ್ರಜಾ ಸೇವೆ ಇಲಾಖೆ ಸ್ಥಾಪನೆ

- Advertisement -
- Advertisement -

ಬೆಂಗಳೂರು: ಜನರ ಕುಂದು ಕೊರತೆಗಳನ್ನು ಆಲಿಸಲು ರಾಜ್ಯ ಸರ್ಕಾರ ಹೊಸ ಇಲಾಖೆಯನ್ನು ಸ್ಥಾಪನೆ ಮಾಡಿದೆ. ಪ್ರಜಾ ಸೇವೆ ಇಲಾಖೆ ಎಂದು ನಾಮಕರಣ ಮಾಡಲಾಗಿದೆ.

ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಇಲಾಖೆ ಸ್ಥಾಪನೆ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಜನರ ಯಾವುದೇ ಸಮಸ್ಯೆಗಳನ್ನು ಈ ಇಲಾಖೆಯಲ್ಲಿ ತಿಳಿಸಬಹುದಾಗಿದ್ದು, ಪ್ರಜಾ ಸೇವೆ ಇಲಾಖೆಯಲ್ಲಿ ಎಲ್ಲಾ ಇಲಾಖೆಗಳ ಕೌಂಟರ್ ಇರಲಿದೆ. ಬೇಡಿಕೆ ಮತ್ತು ಸಮಸ್ಯೆಗಳಿದ್ದವರು ಕೌಂಟರ್ ನಲ್ಲಿ ಸಲ್ಲಿಸಬಹುದಾಗಿದೆ.

- Advertisement -

Latest News

error: Content is protected !!