Thursday, July 2, 2026
Homeಅಪರಾಧಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪ: ಚಂಪತ್ ರಾಯ್ ವಿರುದ್ಧ ಎಫ್‌ಐಆರ್‌ಗೆ ವಕೀಲರ ಆಗ್ರಹ

ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪ: ಚಂಪತ್ ರಾಯ್ ವಿರುದ್ಧ ಎಫ್‌ಐಆರ್‌ಗೆ ವಕೀಲರ ಆಗ್ರಹ

- Advertisement -
- Advertisement -

ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಫೈಜಾಬಾದ್ ಬಾರ್ ಅಸೋಸಿಯೇಷನ್‌ನ ವಕೀಲರು ಜುಲೈ 2 ಗುರುವಾರದಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ನ್ಯಾಯಾಲಯದ ಆವರಣದಿಂದ ರಾಮ ಜನ್ಮಭೂಮಿ ಪೊಲೀಸ್ ಠಾಣೆಯವರೆಗೆ ಧರಣಿ ನಡೆಸಿದ ವಕೀಲರು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಮತ್ತು ದೇವಾಲಯದ ಅಧಿಕಾರಿ ಗೋಪಾಲ್ ರಾವ್ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದರು.

ಫೈಜಾಬಾದ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಕಲಿಕಾ ಪ್ರಸಾದ್ ಮಿಶ್ರಾ ಅವರ ಪ್ರಕಾರ, ಈ ಹಿಂದೆ ಇದೇ ಪ್ರಕರಣದ ಮೊದಲ ಎಫ್‌ಐಆರ್‌ನಲ್ಲಿ ದೂರುದಾರರಾಗಿದ್ದ ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ಅವರ ಹೆಸರನ್ನು ಕೂಡ ಈ ಹೊಸ ದೂರಿನಲ್ಲಿ ಆರೋಪಿಯನ್ನಾಗಿ ಸೇರಿಸಲಾಗಿದೆ.

- Advertisement -

Latest News

error: Content is protected !!