- Advertisement -
![]()
- Advertisement -
ಉಡುಪಿ: ಪಾಪನಾಶಿನಿ ಸೇತುವೆ ಮೇಲೆ ತನ್ನ ಬೈಕ್ ಇರಿಸಿ ಹೊಳೆಗೆ ಹಾರಿ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉದ್ಯಾವರದಲ್ಲಿ ನಡೆದಿದೆ.ಉದ್ಯಾವರ ಪಿತ್ರೋಡಿ ನಿವಾಸಿ ಹರ್ಷಿತ್ (29) ಮೃತ ಯುವಕ.
ಹರ್ಷಿತ್ ಬೆಳಗ್ಗೆ ಪಾಪನಾಶಿನಿ ಸೇತುವೆ ಮೇಲೆ ತನ್ನ ಬೈಕ್ ಇರಿಸಿ ಹೊಳೆಗೆ ಹಾರಿದ್ದರು.ಬಳಿಕ ಮುಳುಗುತಜ್ಞ ಈಶ್ವರ್ ಮಲ್ಪೆ ತಂಡ ನಿರಂತರ ಹುಡುಕಾಟ ನಡೆಸಿ ಸಂಜೆ 5 ಗಂಟೆ ವೇಳೆಗೆ ಮೃತಹೇದ ಪತ್ತೆ ಹಚ್ಚಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
- Advertisement -


