- Advertisement -
![]()
- Advertisement -
ಮಂಗಳೂರು; ಅತೀ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಟ್ರಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಎಕ್ಕೂರು ರೈಲ್ವೇ ಸೇತುವೆ ಮೇಲ್ಭಾಗದಲ್ಲಿ ನಡೆದಿದೆ. ಮೂಲತಃ ಕೇರಳ ಪಾನತ್ತೂರು ನಿವಾಸಿ ಹಾಲಿ ಮಂಗಳೂರಿನ ಉರ್ವ, ಚಿಲಿಂಬಿಯ ಮಾನಸ ರೆಸಿಡೆನ್ಸಿಯಲ್ಲಿ ವಾಸವಿದ್ದ ಸುಧೀಶ್ ಸಿ.ಕೆ (26) ಮೃತ ಬೈಕ್ ಸವಾರ.
. ಮಂಗಳೂರಿನಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಸುಧೀಶ್ ಭಾನುವಾರ ಮುಂಜಾನೆ ಕೇರಳದ ಪಾಣತ್ತೂರಿನಿಂದ ತನ್ನ ಬೈಕ್ ನಲ್ಲಿ ಮಂಗಳೂರಿಗೆ ಅತಿಯಾದ ವೇಗದಿಂದ ಹೋಗುತ್ತಿದ್ದು, ಈ ವೇಳೆ ಎಕ್ಕೂರಿನ ರೈಲ್ವೇ ಮೇಲ್ಸೇತುವೆಯಲ್ಲಿ ಮುಂದಿನಿಂದ ಸಾಗುತ್ತಿದ್ದ ಭಾರೀ ಗಾತ್ರದ ಈಚರ್ ಟಿಪ್ಪರ್ ಟ್ರಕ್‌ಗೆ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆ ಸೇರಿಸಿದ್ದರು.ಆದರೆ ಅಷ್ಟರಲ್ಲಿ ಸುಧಶ್ ಸಾವನ್ನಪ್ಪಿದ್ದಾರೆ.. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
- Advertisement -


