Sunday, June 21, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಮಾನವ ಅಸ್ಥಿಪಂಜರಗಳ ತನಿಖೆ ಚುರುಕು

ಬೆಳ್ತಂಗಡಿ : ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಮಾನವ ಅಸ್ಥಿಪಂಜರಗಳ ತನಿಖೆ ಚುರುಕು

- Advertisement -
- Advertisement -

ಬೆಳ್ತಂಗಡಿ : ಬಂಗ್ಲೆಗುಡ್ಡೆ ಯಲ್ಲಿ ಪತ್ತೆಯಾಗಿದ್ದ 7 ಅಸ್ಥಿಪಂಜರಗಳ ಗುರುತು ಪತ್ತೆ ಕಾರ್ಯವನ್ನು SIT ಚುರುಕು ಗೊಳಿಸಿದೆ. SIT ಬಂಗ್ಲಗುಡ್ಡೆ ಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ  7 ಅಸ್ಥಿಪಂಜರಗಳ DNA ಟೆಸ್ಟ್ ಗೆ FSL ಗೆ ಕಳುಹಿಸಿದೆ.

ಕೇರಳ, ತೆಲಂಗಾಣ ಸೇರಿದಂತೆ ಧರ್ಮಸ್ಥಳ ಸುತ್ತಮುತ್ತಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವವರ ಮಾಹಿತಿಯನ್ನು SIT ಸಂಗ್ರಹಿಸಿದೆ.  SCRB , DCRB, ಸೇರಿದಂತೆ‌ ಇನ್ನಿತರ ಮೂಲಗಳಿಂದ‌ ಮಾಹಿತಿ ಸಂಗ್ರಹ ಮಾಡಿದೆ. ಧರ್ಮಸ್ಥಳಕ್ಕೆ ಬಂದು ನಾಪತ್ತೆಯಾದವರ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ನಾಪತ್ತೆಯಾಗಿರುವ ಬೇರೆ ಬೇರೆ ವ್ಯಕ್ತಿಗಳ 8 ಕುಟುಂಬದವರು ಯಾರೆಲ್ಲಾ ಎಸ್ಐಟಿಯನ್ನು ಸಂಪರ್ಕ ಮಾಡಿದ್ದಾರೆ ಅವರ  ರಕ್ತದ ಮಾದರಿಯನ್ನು ಎಸ್ ಐಟಿ ಪಡೆದಿದೆ.ಅವರ DNA ಟೆಸ್ಟ್ ಗೆ ರಕ್ತದ ಮಾದರಿ ಪಡೆದು SIT FSL ಗೆ ಕಳುಹಿಸಿದೆ. ಇನ್ನೂ 9 ಕುಟುಂಬಗಳ ರಕ್ತದ ಮಾದರಿಗಳನ್ನು ಪಡೆಯಲು SIT ಕ್ರಮ ಕೈಗೊಂಡಿದೆ. FSL ಬಂಗ್ಲಗುಡ್ಡದಲ್ಲಿ ದೊರೆತ ಅಸ್ಥಿಪಂಜರಗಳ‌ DNA ಯೊಂದಿಗೆ ರಕ್ತದ ಮಾದರಿ‌ ಪಡೆದಿರುವ ಕುಟುಂಬಸ್ಥರ DNA ಹೋಲಿಕೆ‌ ಮಾಡಲಿದೆ. ಬಂಗ್ಲೆಗುಡ್ಡದಲ್ಲಿ ಕಳೆದ ವರ್ಷ  ಸಪ್ಟೆಂಬರ್ 17-18  ರಂದು SIT ಪರಿಶೋಧನೆ ಸಂದರ್ಭದಲ್ಲಿ 7 ಅಸ್ಥಿಪಂಜರಗಳು ಪತ್ತೆಯಾಗಿದ್ದವು.

- Advertisement -

Latest News

error: Content is protected !!