Saturday, June 13, 2026
Homeಕರಾವಳಿಉಡುಪಿಕಾಪು ಮಾರಿಗುಡಿ ಮತ್ತು ಉಡುಪಿ ಕೃಷ್ಣ ಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಕಾಪು ಮಾರಿಗುಡಿ ಮತ್ತು ಉಡುಪಿ ಕೃಷ್ಣ ಮಠಕ್ಕೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

- Advertisement -
- Advertisement -

ಉಡುಪಿ: ಕಾಪು ಹೊಸ ಮಾರಿಗುಡಿಗೆ ಕೇಂದ್ರ ಹಣಕಾಸು ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಭೇಟಿ ನೀಡಿದ್ದರು.

ಕಾಪು ತಾಲೂಕಿನಲ್ಲಿರುವ ಹೊಸ ಮಾರಿಗುಡಿ ದೇವಿಯ ದರ್ಶನ ಪಡೆದ ನಿರ್ಮಲಾ ಸೀತಾರಾಮನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಕೂಡಾ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್, ಕನಕನ‌ ಕಿಂಡಿಯಲ್ಲಿ ಕೃಷ್ಣನ ದರ್ಶನ ಪಡೆದು ಶ್ರೀ ಅನಂತೇಶ್ವರ ಮತ್ತು ಶ್ರೀ ಚಂದ್ರಮೌಳೀಶ್ವರ ದೇಗುಲಕ್ಕೂ ಭೇಟಿ ನೀಡಿದರು.

ಅಲ್ಲದೇ ಪರ್ಯಾಯ ಶಿರೂರು ಮಠದ ವೇದವರ್ಧನ ತೀರ್ಥ ಸ್ವಾಮೀಜಿಯವರನ್ನೂ ಭೇಟಿ ಮಾಡಿದ ಕೇಂದ್ರ ಸಚಿವರು ಆಶೀರ್ವಾದ ಪಡೆದರು.ಉಡುಪಿಯ ಉಚ್ಚಿಲ ಶ್ರೀ‌ ಮಹಾಲಕ್ಷ್ಮಿ ಮಂದಿರದ ಆವರಣದಲ್ಲಿ ಇಂದು ನಡೆದ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ಮಲಾ ಸೀತಾರಾಮನ್ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು.

- Advertisement -

Latest News

error: Content is protected !!