Friday, June 5, 2026
Homeತಾಜಾ ಸುದ್ದಿಅಸ್ಸಾಂ ಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ; ಸಿಎಂ ಡಿಕೆ ಶಿವಕುಮಾರ್ ಕೌಂಟರ್ ಕೊಟ್ಟ...

ಅಸ್ಸಾಂ ಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ; ಸಿಎಂ ಡಿಕೆ ಶಿವಕುಮಾರ್ ಕೌಂಟರ್ ಕೊಟ್ಟ ಮಾಜಿ ಸಚಿವ ಕೆ ಎನ್ ರಾಜಣ್ಣ..

- Advertisement -
- Advertisement -

ತುಮಕೂರು; ಅಸ್ಸಾಂ ಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಗೆ ಮಾಜಿ ಸಚಿವ ಕೆ ಎನ್ ರಾಜಣ್ಣ ಕೌಂಟರ್ ಕೊಟ್ಟಿದ್ದಾರೆ.

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರದ ಬಗ್ಗೆ ಮಧುಗಿರಿಯಲ್ಲಿ ಮಾತನಾಡಿದ ಅವರು ಹೌದಾ.. ಹೊಸ ಸುದ್ದಿ ಹೇಳ್ತಿರಾ ಅಂದ್ರೆ ಹಳೆ ಸುದ್ದಿ ಹೇಳ್ತಿರಲ್ಲ. ಯಾವುದೇ ಪತನ ಅಲ್ಲ‌.. ಅವ್ರು ಹೇಳಿದ್ದಾರೆ. ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡೋಕೆ ಸಾಧ್ಯವಾಗಲ್ಲ ಅದಕ್ಕೆ ರಾಜಿನಾಮೆ ಕೊಡ್ತಾ ಇದ್ದೀನಿ ಅಂತ ಹೇಳಿದ್ದಾರೆ..ಎರಡನೇಯದಾಗಿ ನಾನೊಬ್ಬ ಶಾಸಕನಾಗಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತನಾಗಿ ನನ್ನ ಜವಾಬ್ದಾರಿತನ್ನ ನಿಭಾಯಿಸ್ತಿನಿ ಅಂತ ಹೇಳಿದ್ದಾರೆ ಎಂದಿದ್ದಾರೆ.

ಟ್ರಬಲ್ ಶೂಟರ್ ಗೆ ಟ್ರಬಲ್ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವ್ ಟ್ರಬಲ್ ಶೂಟರ್ ರೀ.. ನೀವೇ ಟ್ರಬಲ್ ಶೂಟರ್ ಮಾಡಿರೋದು.. ಹಾಗಿದ್ದ ಮೇಲೆ ಅಸ್ಸಾಂ ಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಮಾಜಿ ಸಚಿವ ಕೆ ಎನ್ ರಾಜಣ್ಣ ಕೌಂಟರ್ ಕೊಟ್ಟಿದ್ದಾರೆ.

ಮುನಿಯಪ್ಪ ರಾಜಿನಾಮೆ ಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು ಈಶ್ವರ ಖಂಡ್ರೆಗೆ ಯಾಕೆ ಅದೆ ಖಾತೆ ಕೊಡಲಿಲ್ಲ. ಪರಮೇಶ್ವರ್ ಗೆ ಹೋಂ ಕೊಡಬೇಕಿತ್ತು ಯಾಕೆ ರೆವಿನ್ಯೂ ಕೊಟ್ಟಿದ್ದಾರೆ. ನೋಡ್ರಿ ಯಾರ್ ಆಸ್ತಿ ಯಾರಪ್ಪನ ಸ್ವತ್ತು ಅಲ್ಲ..ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಅವಕಾಶಗಳು ದೊರೆಯುತ್ತವೆ. ಬದಲಾದ ಸನ್ನಿವೇಶದಲ್ಲಿ ದೊರೆಯುವಂತಹ ಅವಕಾಶಗಳನ್ನ ತಮ್ಮ ಬುದ್ದಿ ಶಕ್ತಿ ಬಳಸಿ ಜನಪರವಾದ ಕೆಲಸವನ್ನ ಮಾಡಬೇಕು ಎಂದಿದ್ದಾರೆ.

- Advertisement -

Latest News

error: Content is protected !!