ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿನಿಯೊಳು ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ 17 ವರ್ಷದ ಅಪ್ರಾಪ್ತ ವಯಸ್ಸಿನ ಎರಡನೇ ವರ್ಷದ ಪಿಯುಸಿ ವಿದ್ಯಾರ್ಥಿನಿ ಜೂನ್ 4 ರಂದು ಮಧ್ಯಾಹ್ನ ಊಟಕ್ಕೆಂದು ಹಾಸ್ಟೆಲ್ ಗೆ ಹೋಗಿ ಬಾಗಿಲು ಹಾಕಿಕೊಂಡು ಶಾಲಿನಿಂದ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಹಾಸ್ಟೆಲ್ ವಾರ್ಡನ್ ಗೆ ಬಾಗಿಲು ಹಾಕಿರುವುದು ಅನುಮಾನ ಬಂದು ತಕ್ಷಣ ಬಾಗಿಲು ಮುರಿದು ಒಳಹೋದಾಗ ಉಸಿರಾಟ ಮಾಡುತ್ತಿದ್ದನ್ನು ಕಂಡು ರಕ್ಷಣೆ ಮಾಡಿ ತಕ್ಷಣ ವಾಹನದ ಮೂಲಕ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ವಿಧ್ಯಾರ್ಥಿನಿ ದಾರಿ ಮಧ್ಯೆ ಮೃತಪಟ್ಟಿದ್ದಾಳೆ.ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿದ್ಯಾರ್ಥಿನಿಯಾಗಿರುವ ಈಕೆ ಹಾಸ್ಟೆಲ್ ನಲ್ಲಿ ವಾಸ್ತವ್ಯವಿದ್ದಳು.
ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಹಾಸ್ಟೆಲ್ ಗೆ ತೆರಳಿ ಸಿಸಿಕ್ಯಾಮರ ಪರಿಶೀಲನೆ ನಡೆಸಿದ್ದು, ಒಬ್ಬಳೆ ವಿದ್ಯಾರ್ಥಿನಿ ಹಾಸ್ಟೆಲ್ ಗೆ ಹೋಗುವ ದೃಶ್ಯ ಸೆರೆಯಾಗಿದೆ.


