- Advertisement -
![]()
- Advertisement -
ಉಡುಪಿ; ಧರ್ಮಸ್ಥಳಕ್ಕೆಂದು ಕುಟುಂಬದವರೊಂದಿಗೆ ತೆರಳುತ್ತಿದ್ದ ಬಾಲಕ ಊಟಕ್ಕಾಗಿ ವಾಹನ ನಿಲ್ಲಿಸಿದ್ದಾಗ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಾರ್ಗದಲ್ಲಿ ಶಿರೂರು ಗ್ರಾಮದ ಮೇಲ್ಪಂಕ್ತಿಯ ಸುಂಕದಕಟ್ಟೆ ಹೊಳೆ ಸೇತುವೆ ಸಮೀಪ ನಡೆದಿದೆ. ಆಯುಷ್ (17) ಮೃತ ಬಾಲಕ.
ಹಾವೇರಿ ಜಿಲ್ಲೆಯ ಸುಭಾಸ (58) ಅವರು ಕುಟುಂಬ ಸದಸ್ಯರು ಹಾಗೂ ಇತರರೊಂದಿಗೆ ಜೂನ್ 1 ರಂದು ಬೆಳಿಗ್ಗೆ ಮುರಡೇಶ್ವರ ದರ್ಶನ ಮಾಡಿಕೊಂಡು ಧರ್ಮಸ್ಥಳಕ್ಕೆ ತೆರಳುವ ಊಟಕ್ಕಾಗಿ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ಸುಭಾಸ ಅವರ ಮೊಮ್ಮಗ ಇತರ ಮಕ್ಕಳೊಂದಿಗೆ ಹೊಳೆಗೆ ನೀರು ತರಲು ತೆರಳಿದ್ದು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ಸಾರ್ವಜನಿಕರು ಹಾಗೂ ಕುಟುಂಬದವರು ರಕ್ಷಿಸಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
- Advertisement -


