Tuesday, June 23, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಹಳೆ ದ್ವೇಷದಿಂದ ಅತ್ತೆ ಮೇಲೆ ಕತ್ತಿಯಿಂದ ಕಡಿದು ಕೊಲೆ ಯತ್ನ: ಆರೋಪಿ ಆಳಿಯನನ್ನು...

ಬೆಳ್ತಂಗಡಿ : ಹಳೆ ದ್ವೇಷದಿಂದ ಅತ್ತೆ ಮೇಲೆ ಕತ್ತಿಯಿಂದ ಕಡಿದು ಕೊಲೆ ಯತ್ನ: ಆರೋಪಿ ಆಳಿಯನನ್ನು ಬಂಧಿಸಿದ ವೇಣೂರು ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಹಳೆ ದ್ವೇಷವನ್ನು ಇಟ್ಟುಕೊಂಡು ಅತ್ತೆ ಮನೆಗೆ ಹೋಗಿ ಅವ್ಯಾಚ ಶಬ್ದಗಳಿಂದ ಆಳಿಯ ಬೈದು ಬಳಿಕ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣ ಸಂಬಂಧ ಆರೋಪಿಯನ್ನು ವೇಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸಂಗಡಿ ನಿವಾಸಿ ಪ್ರಸನ್ನ ಕುಮಾರ್(33) ಬಂಧಿತ ಆರೋಪಿ.

ಪ್ರಕರಣದ ವಿವರ: ಆರೋಪಿ ಪ್ರಸನ್ನ ಕುಮಾರ್ ದೂರುದಾರ ಮಹಿಳೆ ಸುಜಾತ ಅವರ ಗಂಡನ ತಮ್ಮನಾಗಿದ್ದು ಸುಮಾರು 3 ರಿಂದ 4 ವರ್ಷಗಳ ಹಿಂದೆ ಆರೋಪಿ ಪ್ರಸನ್ನ ಕುಮಾರ್ ತನ್ನ ಸಂಬಂಧಿ ಸತೀಶ್ ಎಂಬವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ. ಈ ವೇಳೆ ಆತ ಜೀವಂತ ಪರ್ಯಂತ ಪರ್ಯಂತ ಜೈಲಿನಲ್ಲಿ ಕೊಳೆಯಬೇಕು ಎಂದು ಸುಜಾತ ಅವರ ತಾಯಿ ಹೇಳಿದ್ದರಂತೆ. ಇದೇ ವಿಚಾರಕ್ಕೆ ಸುಜಾತ ಅವರ ತಾಯಿಯೊಂದಿಗೆ ಆರೋಪಿ ಪ್ರಸನ್ನ ಗಲಾಟೆ ಮಾಡಿ ಅವರನ್ನು ಕೊಲೆ ಮಾಡಿ ಬಳಿಕ ಸುಜಾತರನ್ನು ಕೊಲೆ ಮಾಡುವುದಾಗಿ ಹೇಳುತ್ತಿದ್ದ. ಹೀಗಿರುವಾಗಲೇ ಆರೋಪಿ ಪ್ರಸನ್ನ ಮೇ.19 ರಂದು ಮಧ್ಯಾಹ್ನ ಸುಮಾರು 12:45 ಗಂಟೆಯಿಂದ 1 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ದೆಲೋಡಿ ಮನೆಗೆ ಸುಜಾತ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಕತ್ತಿಯನ್ನು ಹಿಡಿದು ಸುಜಾತ ಅವರ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕತ್ತಿಯಿಂದ ತಲೆಗೆ, ಮುಖಕ್ಕೆ, ಕೈಕಾಲುಗಳಿಗೆ ಕಡಿದು ತೀವ್ರ ಹಲ್ಲೆ ನಡೆಸಿದ್ದು ಸುಜಾತ ಅವರ ತಾಯಿಯನ್ನು ಮೂಡಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣ ದಾಖಲು: ವೇಣೂರು ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಾಗದ ಮಹಿಳೆಯ ಮಗಳು ನೀಡಿದ ದೂರಿನ ಮೇರೆಗೆ ಮೇ.19 ರಂದು BNS -2023(329(4),352,118(2),109) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು.

ಕಾರ್ಯಾಚರಣೆ:ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ವೇಣೂರು ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ತಂಡ ಆರೋಪಿ ಅಳಿಯ ಹೊಸಂಗಡಿ ನಿವಾಸಿ ಪ್ರಸನ್ನ ಕುಮಾರ್(33) ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ವೇಣೂರಿನ ಕುರ್ಲೊಟ್ಟು ಜಂಕ್ಷನ್ ನಲ್ಲಿ ಮೇ.20 ರಂದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!