Wednesday, June 3, 2026
Homeತಾಜಾ ಸುದ್ದಿಇಂಡಿಗೋ ವಿಮಾನದಲ್ಲಿ ತಾಂತ್ರಿಕ ವೈಫಲ್ಯದಿಂದ ವಿದ್ಯುತ್ ವ್ಯತ್ಯಯ: 30 ನಿಮಿಷಗಳ ಕಾಲ ಪ್ರಯಾಣಿಕ  ಪರದಾಟ

ಇಂಡಿಗೋ ವಿಮಾನದಲ್ಲಿ ತಾಂತ್ರಿಕ ವೈಫಲ್ಯದಿಂದ ವಿದ್ಯುತ್ ವ್ಯತ್ಯಯ: 30 ನಿಮಿಷಗಳ ಕಾಲ ಪ್ರಯಾಣಿಕ  ಪರದಾಟ

- Advertisement -
- Advertisement -

ಭಾನುವಾರ ರಾತ್ರಿ ವಡೋದರಾದಿಂದ ನವದೆಹಲಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸುಮಾರು 160 ಪ್ರಯಾಣಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಎಸಿ ಮತ್ತು ಬೆಳಕಿಲ್ಲದೆ ಕತ್ತಲಲ್ಲಿ ಪರದಾಡಿದ ಘಟನೆ ನಡೆದಿದೆ.

ರಾತ್ರಿ 8:40ಕ್ಕೆ ಟೇಕ್ ಆಫ್ ಆಗಬೇಕಿದ್ದ ಈ ವಿಮಾನವು ಹೊರಡುವ ಮುನ್ನ ನೆಲದ ವಿದ್ಯುತ್ ಘಟಕಕ್ಕೆ (ಗ್ರೌಂಡ್ ಪವರ್ ಯುನಿಟ್- ಜಿಪಿಯು) ಸಂಪರ್ಕಗೊಂಡಿದ್ದಾಗ, ಜಿಪಿಯು ಏಕಾಏಕಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಇದರಿಂದಾಗಿ ವಿಮಾನದ ಒಳಗಡೆ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಕತ್ತಲಾಗುವ ಜೊತೆಗೆ ಎಸಿ ಕೂಡ ಸ್ಥಗಿತಗೊಂಡಿತು. ಪರಿಣಾಮವಾಗಿ ಕ್ಯಾಬಿನ್ ಒಳಗೆ ಭಾರೀ ಬಿಸಿಯ ವಾತಾವರಣ ನಿರ್ಮಾಣವಾಗಿ ಪ್ರಯಾಣಿಕರು ತೀವ್ರ ಸೆಕೆಯಿಂದ ತತ್ತರಿಸಿದರು. ಈ ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವು ಅಂತಿಮವಾಗಿ ತನ್ನ ನಿಗದಿತ ಸಮಯಕ್ಕಿಂತ 80 ನಿಮಿಷ ತಡವಾಗಿ ಟೇಕಾಫ್ ಆಗಿತ್ತು.

- Advertisement -

Latest News

error: Content is protected !!