Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

- Advertisement -
- Advertisement -

ಬೆಳ್ತಂಗಡಿ : ಅಪರಿಚಿತ ವ್ಯಕ್ತಿ ಮೇ.3 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ಮುಖ್ಯದ್ವಾರದ ಬಳಿ ಯಾವುದೋ ಖಾಯಿಲೆ ಅಸ್ವಸ್ಥಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಮೇ.18 ರಂದು ರಾತ್ರಿ 11:46 ಗಂಟೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರ ವಯಸ್ಸು ಸುಮಾರು 55-60 ವರ್ಷ, ಎತ್ತರ 5.5 ಅಡಿ, ಸಾಧಾಹರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ, ಮುಖದಲ್ಲಿ ಕಪ್ಪು-ಬಿಳಿ ಮಿಶ್ರಿತ ಗಡ್ಡ-ಮೀಸೆ, ತಲೆಯಲ್ಲಿ ಕಪ್ಪು-ಬಿಳಿ ಮಿಶ್ರಿತ ಕೂದಲು, ಎಡಕೆನ್ನೆಯಲ್ಲಿ ಕಪ್ಪು ಎಳ್ಳು ಮಚ್ಚೆ ಗುರುತು, ಬಲಕೋಲು ಕೈಯಲ್ಲಿ ಟ್ಯಾಟೋ ಮಾರ್ಕ್‌ ಇದ್ದು, ಮೃತದೇಹದ ಮೈಮೇಲೆ ಬಿಳಿ, ನೀಲಿ, ನಸುಹಸಿರು ಬಣ್ಣದಲ್ಲಿ ಚೌಕುಳಿಗಳಿರುವ ಶರ್ಟ್‌ ಮತ್ತು ಡೈಪರ್‌ ಧರಿಸಿರುತ್ತಾರೆ.

ಮೃತರ ವಾರಸುದಾರರು ಪತ್ತೆಯಾದಲ್ಲಿ 08256 277253, E-Mail ID [email protected] PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!