Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಹುಲಿ ಗಣತಿಯ ಎರಡು ಕ್ಯಾಮೆರಾ ಕಳ್ಳತನ

ಬೆಳ್ತಂಗಡಿ : ಹುಲಿ ಗಣತಿಯ ಎರಡು ಕ್ಯಾಮೆರಾ ಕಳ್ಳತನ

- Advertisement -
- Advertisement -

ಬೆಳ್ತಂಗಡಿ: ಸವಣಾಲು ಗ್ರಾಮದ ಪೇಲ ಎಂಬಲ್ಲಿ ಹುಲಿ ಗಣತಿಯ ಸಲುವಾಗಿ ಹಾಕಲಾಗಿದ್ದ ಎರಡು ಕ್ಯಾಮೆರಾಗಳನ್ನು ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಕೆ. ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪೇಲ ಎಂಬಲ್ಲಿ ಮೇ ಒಂದರಂದು ಹುಲಿ ಗಣತಿಗಾಗಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.ಮೇ 13 ರಂದು ಪರಿಶೀಲಿಸಿದಾಗ ಎರಡು ಕ್ಯಾಮರಾಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕಂಡು ಬಂದಿದೆ ಕಳವಾದ ಟ್ರ್ಯಾಪ್ ಕ್ಯಾಮೆರಾಗಳ ಅಂದಾಜು ಮೌಲ್ಯ ರೂ 48000 ಆಗಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮೇ.14 ರಂದು ಕಲಂ302(2) ನಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!