Monday, June 8, 2026
Homeತಾಜಾ ಸುದ್ದಿತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ಸಿಎಂ ವಿಜಯ್

ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ಸಿಎಂ ವಿಜಯ್

- Advertisement -
- Advertisement -

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬಹುಮತ ಸಾಬೀತುಪಡಿಸಿದ್ದಾರೆ. 144 ಶಾಸಕರು ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ.

ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಟಿವಿಕೆ ಪಕ್ಷದ 107 ಶಾಸಕರು ಮತ್ತು ಮಿತ್ರ ಪಕ್ಷಗಳ ಜೊತೆಗೆ ಎಐಎಡಿಎಂಕೆಯ 25 ಬಂಡಾಯ ಶಾಸಕರು ಕೂಡಾ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದಾರೆ.

ಪಿಎಂಕೆ ಪಕ್ಷದ ನಾಲ್ವರು ಮತ್ತು ಬಿಜೆಪಿಯ ಓರ್ವ ಶಾಸಕ ಅಧಿವೇಶನಕ್ಕೆ ಗೈರಾಗಿದ್ದರೆ, ವಿಪಕ್ಷ ಡಿಎಂಕೆ ವಿಶ್ವಾಸ ಮತ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಸಭಾತ್ಯಾಗ ಮಾಡಿತ್ತು.

ಇದೇ ವೇಳೆ 22 ಶಾಸಕರು ಟಿವಿಕೆ ಸರ್ಕಾರದ ವಿರುದ್ಧವಾಗಿ ಮತ ಚಲಾಯಿಸಿದ್ದರು. ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾರಣ ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸಿಎಂ ವಿಜಯ್ ರಾಜೀನಾಮೆ ನೀಡಿರುವ ಕಾರಣ ಸದ್ಯ 233 ಸದಸ್ಯ ಬಲ ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು 117 ಸ್ಥಾನಗಳ ಅವಶ್ಯಕತೆ ಇತ್ತು.

- Advertisement -

Latest News

error: Content is protected !!