Thursday, June 4, 2026
HomeWorldರಾಷ್ಟ್ರಮಟ್ಟದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಮಿಂಚಿದ ಮಂಗಳೂರಿನ ಪುಟಾಣಿಗಳು; ಭಾರತವನ್ನು ಪ್ರತಿನಿಧಿಸಲಿದ್ದಾರೆ ಲೌಕ್ಯ ಎಸ್ ರೈ ಮತ್ತು...

ರಾಷ್ಟ್ರಮಟ್ಟದ ಮಾಡೆಲಿಂಗ್ ಸ್ಪರ್ಧೆಯಲ್ಲಿ ಮಿಂಚಿದ ಮಂಗಳೂರಿನ ಪುಟಾಣಿಗಳು; ಭಾರತವನ್ನು ಪ್ರತಿನಿಧಿಸಲಿದ್ದಾರೆ ಲೌಕ್ಯ ಎಸ್ ರೈ ಮತ್ತು ಸಚಿತಾ ರಾವ್

- Advertisement -
- Advertisement -

ಮಂಗಳೂರು: ಕೇರಳದ ಕ್ಯಾಲಿಕಟ್‌ನಲ್ಲಿ ನಡೆದ ಪ್ರತಿಷ್ಠಿತ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ (JMI) ಸೀಸನ್-10 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದ ಪುಟಾಣಿ ಪ್ರತಿಭೆಗಳು ಮಿಂಚಿದ್ದಾರೆ. ಮಂಗಳೂರು ಹಾಗೂ ಬೆಂಗಳೂರು ಮೂಲದ ಲೌಕ್ಯ ಎಸ್. ರೈ ಹಾಗೂ ಸಚಿತಾ ರಾವ್ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.

6 ವರ್ಷದ ಲೌಕ್ಯ ಎಸ್. ರೈ ಹಾಗೂ 12 ವರ್ಷದ ಸಚಿತಾ ರಾವ್ ಅವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು.

ಲೌಕ್ಯ ಎಸ್. ರೈ ಅವರು ಸಚಿನ್ ಮತ್ತು ಸುಷ್ಮಾ ರೈ ದಂಪತಿಯ ಪುತ್ರಿಯಾಗಿದ್ದು, ಇವರು 6-8 ವರ್ಷದ ವಿಭಾಗದಲ್ಲಿ ‘SR TOD JMI India’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಭಾ ಸುತ್ತಿನಲ್ಲಿ ಅದ್ಭುತ ಪ್ರದರ್ಶನ ನೀಡಿ ‘Extreme Talent Award’ ಕೂಡ ತನ್ನದಾಗಿಸಿಕೊಂಡಿದ್ದಾರೆ.

ಸಚಿತಾ ರಾವ್ ಸಚಿನ್ ರಾವ್ ಮತ್ತು ಅಶ್ವಿನ್ ರಾವ್ ದಂಪತಿಯ ಪುತ್ರಿಯಾಗಿದ್ದು, 10-12 ವರ್ಷದ ವಿಭಾಗದಲ್ಲಿ ಪೈಪೋಟಿ ನೀಡಿ ‘Miss Pre Teen JMI India’ ಪಟ್ಟವನ್ನು ಅಲಂಕರಿಸಿದ್ದಾರೆ.

ಈ ಇಬ್ಬರೂ ಪ್ರತಿಭೆಗಳು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಯ್ರಾ ಪೇಜಂಟ್ರಿ ಅಂಡ್ ಮಾಡೆಲಿಂಗ್ ಸ್ಕೂಲ್ (Vayra Pageantry and Modeling School) ನ ವಿದ್ಯಾರ್ಥಿನಿಯರಾಗಿದ್ದು, ಖ್ಯಾತ ತರಬೇತುದಾರ್ತಿ ಯಶಸ್ವಿನಿ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದರು.

ಇದೀಗ ಲೌಕ್ಯ ಮತ್ತು ಸಚಿತಾ ಅಂತರರಾಷ್ಟ್ರೀಯ ವೇದಿಕೆಗೆ ಸಜ್ಜಾಗಿದ್ದು, ಬರುವ ಆಗಸ್ಟ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಇವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

- Advertisement -

Latest News

error: Content is protected !!