Friday, June 5, 2026
Homeಆರಾಧನಾಮುಜರಾಯಿ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸತತ 15ನೇ ಬಾರಿ 'ನಂಬರ್ 1' ಪಟ್ಟ!

ಮುಜರಾಯಿ ದೇವಸ್ಥಾನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸತತ 15ನೇ ಬಾರಿ ‘ನಂಬರ್ 1’ ಪಟ್ಟ!

- Advertisement -
- Advertisement -

ರಾಜ್ಯದ ಪ್ರಸಿದ್ಧ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು 2025-26ರ ಆರ್ಥಿಕ ವರ್ಷದಲ್ಲಿ ದಾಖಲೆಯ ಆದಾಯ ಗಳಿಸುವ ಮೂಲಕ ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಮತ್ತೊಮ್ಮೆ ‘ನಂಬರ್ 1’ ಸ್ಥಾನವನ್ನು ಅಲಂಕರಿಸಿದೆ. ದೇವಸ್ಥಾನವು ಸತತ 15ನೇ ವರ್ಷವೂ ಈ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ದೇವಸ್ಥಾನದ ಅಧಿಕೃತ ಮೂಲಗಳ ಪ್ರಕಾರ, ಏಪ್ರಿಲ್ 1, 2025 ರಿಂದ ಮಾರ್ಚ್ 31, 2026 ರವರೆಗಿನ ಅವಧಿಯಲ್ಲಿ ಒಟ್ಟು ₹167,89,09,080.77 ಆದಾಯ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ (₹155.95 ಕೋಟಿ) ಆದಾಯಕ್ಕೆ ಹೋಲಿಸಿದರೆ, ಈ ಬಾರಿ ಸುಮಾರು ₹12 ಕೋಟಿಗಳಷ್ಟು ಏರಿಕೆ ಕಂಡುಬಂದಿದೆ. ಇದೇ ಅವಧಿಯಲ್ಲಿ ದೇವಸ್ಥಾನದ ವಿವಿಧ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವೆಚ್ಚಗಳಿಗಾಗಿ ₹85.20 ಕೋಟಿ ಖರ್ಚಾಗಿದೆ.

ಸರ್ಪಸಂಸ್ಕಾರ, ನಾಗಪ್ರತಿಷ್ಠೆ ಹಾಗೂ ಆಶ್ಲೇಷ ಬಲಿಯಂತಹ ವಿಶೇಷ ಸೇವೆಗಳಿಂದ ಸುಮಾರು ₹64.08 ಕೋಟಿ ಆದಾಯ, ಕಾಣಿಕೆ ಹಾಗೂ ಹುಂಡಿ ಸಂಗ್ರಹದಿಂದ ಸುಮಾರು ₹30.54 ಕೋಟಿ, ಹೂಡಿಕೆಗಳ ಮೇಲಿನ ಬಡ್ಡಿಯಿಂದ ₹49.11 ಕೋಟಿ ಹಾಗೂ ಛತ್ರಗಳು ಮತ್ತು ಕಟ್ಟಡಗಳ ಬಾಡಿಗೆಯಿಂದ ₹6.93 ಕೋಟಿ ಸಂಗ್ರಹವಾಗಿದೆ.

- Advertisement -

Latest News

error: Content is protected !!