Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಧರ್ಮಸ್ಥಳದಲ್ಲಿ ರಾಡ್ ಗೆ ನೇಣುಬಿಗಿದು ವೃದ್ಧ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ರಾಡ್ ಗೆ ನೇಣುಬಿಗಿದು ವೃದ್ಧ ಆತ್ಮಹತ್ಯೆಗೆ ಶರಣು

- Advertisement -
- Advertisement -

ಬೆಳ್ತಂಗಡಿ : ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯ ಹೊರಗಿನ ಅಳವಡಿಸಿದ್ದ ರಾಡ್ ಗೆ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಜೋಡುಸ್ನಾನದ ಅಗುಳೆ ನಿವಾಸಿ ಐತಪ್ಪ ಪೂಜಾರಿ (68) ಎಂಬವರು ಮೇ.6 ರಂದು ರಾತ್ರಿ 11 ಗಂಟೆಯಿಂದ ಮೇ.7 ರ ಬೆಳಗ್ಗೆ 6 ಗಂಟೆ ಒಳಗಡೆ ಮನೆಯ ಹೊರಗೆ ಅಳವಡಿಸಿದ್ದ ರಾಡ್ ಗೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಐತಪ್ಪ ಪೂಜಾರಿರವರ ಸೊಸೆ ಬೆಳಗ್ಗೆ 6 ಗಂಟೆಗೆ ಎದ್ದು ಮನೆಯ ಅಂಗಳಕ್ಕೆ ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ ಎಂದು ಮೇ.7 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!