Thursday, June 4, 2026
Homeಚಿಕ್ಕಮಗಳೂರುಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮನೆ ಮುಂದೆ ವಾಮಾಚಾರ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮನೆ ಮುಂದೆ ವಾಮಾಚಾರ

- Advertisement -
- Advertisement -

ಚಿಕ್ಕಮಗಳೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮನೆ ಮುಂದೆ ವಾಮಾಚಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಎಸಿಎಫ್ ಜೀಪ್ ಡ್ರೈವರ್ ಮೇಲೂ ವಾಮಾಚಾರ ಪ್ರಯೋಗಿಸಲಾಗಿದೆ ಎನ್ನಲಾಗಿದೆ. ಚಿಕ್ಕಮಗಳೂರು ಡಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಘಟನೆ ನಡೆದಿದೆ.

ಎಸಿಎಫ್ ಮೋಹನ್ ಹಾಗೂ ಅವರ ಜೀಪ್ ಚಾಲಕ ಮೇಲೆ ವಾಮಾಚಾರ ಪ್ರಯೋಗಿಸಲಾಗಿದ್ದು, ಮನೆಯ ಗೇಟ್ ಬಳಿ ಎಸಿಎಫ್ ಮೋಹನ್, ಜೀಪ್ ಚಾಲಕನ ಫೋಟೋ ಇಟ್ಟು ವಾಮಾಚಾರ ಮಾಡಲಾಗಿದೆ. ಮಣ್ಣಿನ ಮಡಕೆಯೊಳಗೆ ಇಬ್ಬರ ಫೋಟೋ ಇಟ್ಟು, ಅರಿಶಿನ-ಕುಕುಂಕುಮ ಹಾಕಿ ಮಡಕೆ ಒಡೆದಿದ್ದಾರೆ. ಕಚೇರಿಯ ಸಿಬ್ಬಂದಿ ಮೇಲೆ ಅನುಮಾನ ಎಂದು ಎಸಿಎಫ್ ದೂರು  ಕೊಟ್ಟಿದ್ದಾರೆ. ಎಸಿಎಫ್ ದೂರಿನಡಿ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!