- Advertisement -
![]()
- Advertisement -
ಮೂಡಬಿದಿರೆ: ಶಾರ್ಜಾ–ದುಬೈ ಗಡಿಯ ಅನ್ಸಾರ್ ಮಾಲ್ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೂಡುಬಿದಿರೆ ಶಿರ್ತಾಡಿಯ ಐದು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿರ್ತಾಡಿ ಮೂಲದ ಹಕೀಮ್ ಅವರ ಐದು ವರ್ಷದ ಮಗಳು ಫಾತಿಮಾ ಅನಿಹಾ ಮೃತ ಬಾಲಕಿ.
ಶಾರ್ಜಾದಲ್ಲೇ ಉದ್ಯೋಗದಲ್ಲಿರುವ ಹಕೀಮ್ ಕುಟುಂಬದೊಂದಿಗೆ ವಾಸವಾಗಿದ್ದು, ಭಾನುವಾರ ರಾತ್ರಿ ಶಾಪಿಂಗ್ ಮುಗಿಸಿ ತಮ್ಮ ಕಾರಿನಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಢಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಕುಟುಂಬದಲ್ಲಿ ಮೂವರು ಗಂಡು ಮಕ್ಕಳಿದ್ದು, ಈಕೆ ಏಕೈಕ ಪುತ್ರಿಯಾಗಿದ್ದಳು. ಬಾಲಕಿಯ ಅಂತ್ಯಕ್ರಿಯೆ ಶಾರ್ಜಾದಲ್ಲೇ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
- Advertisement -


