Thursday, June 4, 2026
Homeಕರಾವಳಿಉಡುಪಿಹುಲ್ಲು ಹೆರಿಯುವಾಗ ಹಾವು ಕಚ್ಚಿ ಮಹಿಳೆ ಸಾವು

ಹುಲ್ಲು ಹೆರಿಯುವಾಗ ಹಾವು ಕಚ್ಚಿ ಮಹಿಳೆ ಸಾವು

- Advertisement -
- Advertisement -

ಉಡುಪಿ; ಹುಲ್ಲು ಹೆರಿಯುವಾಗ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಕೆರಾಡಿ ಗ್ರಾಮದ ಪ್ರೇಮ ಶೆಡ್ತಿ (47) ಮೃತರು.

ಪ್ರೇಮಾ ಅವರು ಮೇ 1ರಂದು ಸಂಜೆ ಸುಮಾರು 6:00 ರಿಂದ 7:00 ಗಂಟೆಯ ನಡುವೆ ಮನೆಯ ಪಕ್ಕದ ತೋಟದಲ್ಲಿ ದನಗಳಿಗೆ ಹುಲ್ಲು ಹೆರಿಯುತ್ತಿದ್ದರು. ಈ ವೇಳೆ ಅವರ ಬಲಗಾಲಿಗೆ ಯಾವುದೋ ಹಾವು ಕಚ್ಚಿದಂತಾಗಿದೆ. ಕೂಡಲೇ ಮನೆಗೆ ಬಂದು ಪರಿಶೀಲಿಸಿದಾಗ ಕಾಲಿನ ಎರಡು ಮೂರು ಕಡೆಗಳಲ್ಲಿ ಹಾವಿನ ಕಡಿತದ ಗುರುತುಗಳು ಕಂಡುಬಂದಿವೆ.

ತಕ್ಷಣವೇ ಅವರನ್ನು ರಾತ್ರಿ 9:30ರ ಸುಮಾರಿಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ವೈದ್ಯರು ಪರೀಕ್ಷಿಸಿ, ಆಕೆ ಆಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ

- Advertisement -

Latest News

error: Content is protected !!