Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಧರ್ಮಸ್ಥಳಕ್ಕೆ ಮಗಳ ಮದುವೆಗೆ ಬಂದ ವ್ಯಕ್ತಿ ನಾಪತ್ತೆ; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ...

ಬೆಳ್ತಂಗಡಿ : ಧರ್ಮಸ್ಥಳಕ್ಕೆ ಮಗಳ ಮದುವೆಗೆ ಬಂದ ವ್ಯಕ್ತಿ ನಾಪತ್ತೆ; ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ಹೋಗದೆ ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಮಂಜುನಾಥ. ಇ(47) ರವರು ದಿನಾಂಕ 29-04-2026 ರಂದು ತನ್ನ ಮಗಳ ಮದುವೆಗೆಂದು ಮನೆಯವರ ಜೊತೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಧರ್ಮಸ್ಥಳ ದೇವಸ್ಥಾನಕ್ಕೆಂದು ಬಂದವರು ದೇವರ ದರ್ಶನ ಮುಗಿಸಿ ದೇವಸ್ಥಾನದ ಮುಂಭಾಗದಲ್ಲಿರುವ ಬೃಂದಾವನ ಪಾರ್ಕಿಗೆ ಹೋಗಿ ವಾಪಾಸ್ಸು ಬರುವ ಸಮಯ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ದೇವಸ್ಥಾನ ಮುಂಭಾಗದಿಂದ ಕಾಣೆಯಾಗಿರುತ್ತಾರೆ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ಮೇ.1 ರಂದು ನಾಪತ್ತೆಯಾದ ಮಂಜುನಾಥ್ ಅವರ ಚಿಕ್ಕಪ್ಪನ ಮಗ ದಿನೇಶ್ ಪಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕಾಣೆಯಾದ ಮಂಜುನಾಥ್ ವಿವರ; ತಂದೆಯ ಹೆಸರು: ದಿ| ಈಶ್ವರಪ್ಪ, ಸುಮಾರು 5 ಅಡಿ ಎತ್ತರ, ಸಪೂರ ಶರೀರ, ಕಪ್ಪು ಮೈಬಣ್ಣ, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಪ್ಯಾಂಟ್‌  ಧರಿಸಿರುತ್ತಾರೆ. ಭಾಷೆ: ಕನ್ನಡ ಮಾತನಾಡುತ್ತಾರೆ.

ಕಾಣೆಯಾದ ವ್ಯಕ್ತಿ ಪತ್ತೆಯಾದಲ್ಲಿ 08256 277253, E-Mail ID [email protected]    PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500, ಗೆ ಸಂಪರ್ಕಿಸಬೇಕಾಗಿ ಧರ್ಮಸ್ಥಳ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!