Thursday, June 4, 2026
Homeಕರಾವಳಿವಕೀಲರ ಸಂಘ (ರಿ) ಬಂಟ್ವಾಳದ 2025-26 ನೇ ಸಾಲಿನ ವಾರ್ಷಿಕೋತ್ಸವ "ವಾರ್ಷಿಕ ಸ್ನೇಹ ಮಿಲನ" ಕಾರ್ಯಕ್ರಮ

ವಕೀಲರ ಸಂಘ (ರಿ) ಬಂಟ್ವಾಳದ 2025-26 ನೇ ಸಾಲಿನ ವಾರ್ಷಿಕೋತ್ಸವ “ವಾರ್ಷಿಕ ಸ್ನೇಹ ಮಿಲನ” ಕಾರ್ಯಕ್ರಮ

- Advertisement -
- Advertisement -

ವಕೀಲರ ಸಂಘ (ರಿ) ಬಂಟ್ವಾಳ ಇದರ 2025-26 ನೇ ಸಾಲಿನ ವಾರ್ಷಿಕೋತ್ಸವ “ವಾರ್ಷಿಕ ಸ್ನೇಹ ಮಿಲನ” ಕಾರ್ಯಕ್ರಮ ಬಿ.ಸಿ. ರೋಡ್ ನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ವಾರ್ಷಿಕ ಸ್ನೇಹ ಮಿಲನ 2026 ಕಾರ್ಯಕ್ರಮವನ್ನು ಬಂಟ್ವಾಳದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಶ್ರೀ ಅನಿಲ್ ಪ್ರಕಾಶ್ ಎಂ ಪಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳದ ಹಿರಿಯ ವಕೀಲರಾದ ಶ್ರೀ ಪುಂಡಿ ಕಾಯಿ ನಾರಾಯಣ ಭಟ್ ರವರನ್ನು ತನ್ನ ವೃತ್ತಿ ಜೀವನದ 50 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಅವರ ಶಿಷ್ಯ ವೃಂದ ಮತ್ತು ವಕೀಲರ ಸಂಘ (ರಿ), ಬಂಟ್ವಾಳ ಜೊತೆ ಸೇರಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಕೀಲರು ಮತ್ತು ವಕೀಲ ಮಿತ್ರರ ಮಕ್ಕಳನ್ನು ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂಟ್ವಾಳದ ವೆಂಕಟರಮಣ ದೇವಸ್ಥಾನದ ಟ್ರಸ್ಟಿಗಳು ಹಾಗೂ ಉದ್ಯಮಿ ಶ್ರೀ ಸುರೇಶ್ ವಿ ಬಾಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ವಕೀಲರ ಸಂಘ ಇದರ ಜಿಲ್ಲಾಧ್ಯಕ್ಷರು ಹಾಗೂ ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೋಸ್ತ ಎಂ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ವಕೀಲ ಮಿತ್ರರು ಭಾಗವಹಿಸಿದ್ದರು. ವಕೀಲರ ಸಂಘ (ರಿ), ಬಂಟ್ವಾಳದ ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ ಭಂಡಾರಿ ಅವರು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ ಧನ್ಯವಾದವನ್ನು ಸಮರ್ಪಿಸಿದರು.

ಗಿರೀಶ್ ಮುಳಿಯಾಲ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದ ನಂತರ ವಕೀಲರಿಂದ ವಿವಿಧ ವಿನೋದಾವಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

- Advertisement -

Latest News

error: Content is protected !!