Saturday, June 6, 2026
Homeಕರಾವಳಿಮಂಗಳೂರು ಮಂಗಳೂರು ನ್ಯಾಯವಾದಿಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಬಂಟ್ವಾಳದ ನೂತನ ಶಾಖೆಯ ಉದ್ಘಾಟನೆ

 ಮಂಗಳೂರು ನ್ಯಾಯವಾದಿಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಬಂಟ್ವಾಳದ ನೂತನ ಶಾಖೆಯ ಉದ್ಘಾಟನೆ

- Advertisement -
- Advertisement -

ಬಂಟ್ವಾಳ; ಮಂಗಳೂರು ನ್ಯಾಯವಾದಿಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ಬಂಟ್ವಾಳದ ನೂತನ ಶಾಖೆಯು ಬಂಟ್ವಾಳದ ನ್ಯಾಯಾಲಯದ ಆವರಣದಲ್ಲಿ ಇಂದು ಉದ್ಘಾಟನೆಗೊಂಡಿದ್ದು,  ಬಂಟ್ವಾಳದ ನೂತನ ಶಾಖೆಯ ಕಚೇರಿಯನ್ನು ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಚಂಗಪ್ಪ ರವರು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಶ್ರೀ ಅನಿಲ್ ಪ್ರಕಾಶ್ ಎಂ ಪಿ ಯವರು ಗೌರವ ಉಪಸ್ಥಿತರಿದ್ದರು.  ಮಂಗಳೂರು ನ್ಯಾಯವಾದಿಗಳ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚಾರ್ಡ್ ಕೋಸ್ತ ಎಂ, ಸೌಹಾರ್ದ ಅಭಿವೃದ್ಧಿ ಅಧಿಕಾರಿಯಾದ ಶ್ರೀ ನಂದನ್ ಬಿ ಏನ್, ವಕೀಲರ ಸಂಘ (ರಿ),ಬಂಟ್ವಾಳದ ಪ್ರಧಾನ ಕಾರ್ಯದರ್ಶಿ ಕೆ ಎನ್ ಭಂಡಾರಿ ಯವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ನ್ಯಾಯವಾದಿಗಳ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನಿರ್ದೇಶಕರುಗಳು, ಹಿರಿಯ ಕಿರಿಯ ವಕೀಲ ಮಿತ್ರರು ಹಾಜರಿದ್ದರು. ಬಂಟ್ವಾಳ ವಕೀಲ ಸಂಘದ ಅಧ್ಯಕ್ಷರಾದ ರಿಚಾಡ್ ಕೋಸ್ತ ಎಂ ಅತಿಥಿ ಆಭ್ಯಾಗತರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ ಎನ್ ಭಂಡಾರಿ ಧನ್ಯವಾದ ಸಲ್ಲಿಸಿದ್ದು, ವೀರೇಂದ್ರ ಎಂ ಸಿದ್ದಕಟ್ಟೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Latest News

error: Content is protected !!