Thursday, June 4, 2026
Homeಉತ್ತರ ಕನ್ನಡಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ವಧು ಪರಾರಿ

ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ವಧು ಪರಾರಿ

- Advertisement -
- Advertisement -

ಉತ್ತರಕನ್ನಡ: ಮದುವೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ವಧು ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಶಿರಸಿ ಪಟ್ಟಣದ ಮುಸ್ಲಿಂ ಗಲ್ಲಿಯ ನಿವಾಸಿಯಾದ ಸಿಫಾ (25) ನಾಪತ್ತೆಯಾದಾಕೆ.  ಮೂಲಗಳ ಮಾಹಿತಿ ಪ್ರಕಾರ ಸಿಫಾ ಎಂಬಿಬಿಎಸ್‌ ಓದುತ್ತಿರುವ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದು, ಮದುವೆ ಪಾಲಕರು ಒಪ್ಪದೇ ಶಿರಸಿಯ ಅಬ್ರಾರ್‌ ಎಂಬಾತನ ಜೊತೆ ಮದುವೆ ನಿಶ್ಚಯ ಮಾಡಿದ್ದರು.

ಶಿರಸಿಯ ಉಸುರಿ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮದುವೆ ಸಿದ್ಧತೆಗಳು ನಡೆಯುತ್ತಿರುವ ನಡುವೆಯೇ ಸಿಫಾ ಬೆಳ್ಳಂಬೆಳಿಗ್ಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಇದರಿಂದ ಕುಟುಂಬದವರು ಆಘಾತಗೊಂಡಿದ್ದಾರೆ.

ಮದುವೆಗೆಂದು ಕ್ವಿಂಟಾಲ್‌ಗಟ್ಟಲೆ ಮಟನ್‌ ಹಾಗೂ ಚಿಕನ್‌ ಸಿದ್ಧಪಡಿಸಲಾಗಿದ್ದರೂ ಮದುವೆ ರದ್ದುಗೊಂಡ ಕಾರಣ ಅವೆಲ್ಲವೂ ವ್ಯರ್ಥವಾಗಿದೆ. ಸಿಫಾ ಅವರ ತಂದೆ ಝಹೀರ್ ಖಾನ್ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವತಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

- Advertisement -

Latest News

error: Content is protected !!