ಹಾಸನ: ವಿವಾಹಿತೆಯೊಬ್ಬಳು ತನ್ನ ಗಂಡನಿಗೆ ಆಸ್ಪತ್ರೆಗೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೊರಟು, ಬಳಿಕ ಪ್ರಿಯಕರನೊಂದಿಗೆ ಕಾರಿನಲ್ಲೇ ಮದುವೆಯಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮುಕಂದೂರು ಗ್ರಾಮದ ನಿವಾಸಿಯಾದ ಮಹಿಳೆ ಸುಮಾರು 8 ವರ್ಷಗಳ ಹಿಂದೆ ಪ್ರಕಾಶ್ ಎಂಬವರನ್ನು ವಿವಾಹವಾಗಿದ್ದಳು. ದಂಪತಿಗಳ ಮಧ್ಯೆ ವೈಮನಸ್ಸು ಉಂಟಾಗಿ, ಕೆಲಕಾಲ ಪ್ರತ್ಯೇಕವಾಗಿದ್ದರು. ಈ ಸಂಬಂಧವಾಗಿ ಪೊಲೀಸ್ ಠಾಣೆಯಲ್ಲಿಯೂ ಮಾತುಕತೆ ನಡೆದಿತ್ತು. ಇದಾದ ನಂತರ ಕೆಲಕಾಲ ಪ್ರತ್ಯೇಕವಾಗಿ ಇದ್ದ ಮಹಿಳೆಯನ್ನು ಕುಟುಂಬದವರು ಪುನಃ ಮನೆಗೆ ಕರೆತಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಮಹಿಳೆಯೂ ಇತ್ತೀಚೆಗೆ ಗಂಡನ ಬಳಿ ಆಸ್ಪತ್ರೆ ಹೋಗುವುದಾಗಿ ತಿಳಿಸಿ ಹೊರಗೆ ಹೊರಟಿದ್ದು, ನಂತರದಲ್ಲಿ ತನ್ನ ಪ್ರಿಯಕರನೊಂದಿಗೆ ತೆರಳಿ ಕಾರಿನಲ್ಲೇ ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಇನ್ನು ದಂಪತಿಗಳಿಗೆ ಒಂದು ಮಗುವಿದ್ದು, ಪತ್ನಿಯ ಈ ನಡೆದಿಂದ ಮನನೊಂದು ಪತಿ ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಮೊಬೈಲ್ ಟ್ರ್ಯಾಕಿಂಗ್ ಮೂಲಕ ಮಹಿಳೆಯ ಸ್ಥಳ ಪತ್ತೆಹಚ್ಚಿರುವುದಾಗಿ ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


