- Advertisement -
![]()
- Advertisement -
ಮೂಡುಬಿದಿರೆ: ಇಲ್ಲಿನ ತೋಡಾರ್ ಪಡೋಡ್ಡಿ ಎಂಬಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು, ವಾಹನವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುರುಕಿದ್ದ 9 ದನಗಳನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ಇನ್ನು ಜಾಲದಲ್ಲಿ ತೊಡಗಿಕೊಂಡಿದ್ದ ದನಗಳ್ಳರು ಪೊಲೀಸರ ಬರುವಿಕೆಯನ್ನು ಕಂಡು ಸ್ಥಳದಲ್ಲಿಯೇ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಮೂಡುಬಿದಿರೆ ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
- Advertisement -


