Friday, June 5, 2026
Homeಚಿಕ್ಕಮಗಳೂರುಚಿಕ್ಕಮಗಳೂರಿನಲ್ಲಿ ಹೊಳೆಯಲ್ಲಿ ಈಜಲು ಹೋಗಿದ್ದ ವಿಟ್ಲ ಮೂಲದ ಬಾಲಕ ನೀರುಪಾಲು

ಚಿಕ್ಕಮಗಳೂರಿನಲ್ಲಿ ಹೊಳೆಯಲ್ಲಿ ಈಜಲು ಹೋಗಿದ್ದ ವಿಟ್ಲ ಮೂಲದ ಬಾಲಕ ನೀರುಪಾಲು

- Advertisement -
- Advertisement -

ಚಿಕ್ಕಮಗಳೂರು;  ಹೊಳೆಯಲ್ಲಿ ಈಜಲು ಹೋಗಿದ್ದ ವಿಟ್ಲ ಮೂಲದ ಬಾಲಕ ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರಿನ ಜಯಪುರದಲ್ಲಿ ನಡೆದಿದೆ. ವಿಟ್ಲ ಮೂಲದ ಅನಿಕೇತ್ (13) ಮೃತಪಟ್ಟ ಬಾಲಕ. ಅನಿಕೇತ್ ಜಯಪುರದ ಸತ್ಯ ಸಾಯಿ ದಿವ್ಯನಿಕೇತನ್ ಶಾಲೆಯ 7ನೇ ತರಗತಿ ಓದುತ್ತಿದ್ದ. ಶಾಲೆ ಸಮೀಪದ ಹೊಳೆಯಲ್ಲಿ ಸಹಪಾಠಿಗಳೊಂದಿಗೆ ಈಜಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಶಿಕ್ಷಕರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಮೃತಪಟ್ಟಿದ್ದಾನೆ. ಮಗನ ಸಾವಿನ ಕುರಿತು ವಿದ್ಯಾರ್ಥಿಯ ತಂದೆ ಗೋವರ್ಧನ್ ಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!