Wednesday, June 24, 2026
Homeಕರಾವಳಿಮಂಗಳೂರುಮಂಗಳೂರು; ಬೈಕಂಪಾಡಿಯ AWL Agri Business Ltd ವತಿಯಿಂ ಸರ್ಕಾರಿ ಶಾಲೆಗಳಿಗೆ "Teach Next" ಡಿಜಿಟಲ್...

ಮಂಗಳೂರು; ಬೈಕಂಪಾಡಿಯ AWL Agri Business Ltd ವತಿಯಿಂ ಸರ್ಕಾರಿ ಶಾಲೆಗಳಿಗೆ “Teach Next” ಡಿಜಿಟಲ್ ಕ್ಲಾಸ್ ರೂಮ್ ಹಸ್ತಾಂತರ

- Advertisement -
- Advertisement -

ಮಂಗಳೂರು; ಬೈಕಂಪಾಡಿಯ AWL Agri Business Ltd ವತಿಯಿಂದ ಸಾಮಾಜಿಕ ಜವಾಬ್ದಾರಿಯ (CSR) ಅಂಗವಾಗಿ ಅಂಗರಾಗುಂಡಿ ಹಾಗೂ ಜೊಕಟ್ಟೆ ಸರ್ಕಾರಿ ಶಾಲೆಗಳಿಗೆ “Teach Next” ಡಿಜಿಟಲ್ ಕ್ಲಾಸ್ ರೂಮ್ ಪರಿಹಾರವನ್ನು ಪ್ರಾಯೋಜಿಸಲಾಯಿತು. ಸುಮಾರು ಐದು ಲಕ್ಷ ರೂಪಾಯಿ ವೆಚ್ಚದ ಈ ಮಹತ್ವದ ಯೋಜನೆ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಹೊಸ ಬೆಳಕು ಮೂಡಿಸಿದೆ.

ಈ ಯೋಜನೆಯ ಉದ್ಘಾಟನೆಯನ್ನು AWL Agri Business Ltd ಸಂಸ್ಥೆಯ ಪ್ಲಾಂಟ್ ಹೆಡ್ ಶ್ರೀ ಮನೋಜ್ ಕುಂಭಾರೆ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ HR ಮ್ಯಾನೇಜರ್ ಶ್ರೀ ಶಾಂತಕುಮಾರ್ ಹಾಗೂ ಮ್ಯಾನೇಜರ್ ಶ್ರೀ ಮಿಥುನ್ ಉಪಸ್ಥಿತರಿದ್ದು, ತಮ್ಮ ಮಾತುಗಳಲ್ಲಿ ಡಿಜಿಟಲ್ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.

Next Education India Pvt Ltd ಸಂಸ್ಥೆಯ ಝೋನಲ್ ಹೆಡ್ ಶ್ರೀ ಅಶ್ವಿನ್ ಶೇಕಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಡಿಜಿಟಲ್ ಶಿಕ್ಷಣದ ಪ್ರಯೋಜನಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಅಂಗರಾಗುಂಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಕಲಾ ಹಾಗೂ ಜೊಕಟ್ಟೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಖಾದರ್ ಅವರು ಸಹ ಉಪಸ್ಥಿತರಿದ್ದರು.

ಈ ನವೀನ ಡಿಜಿಟಲ್ ಕ್ಲಾಸ್ ರೂಮ್ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳು ಪಾಠಗಳನ್ನು ಆಡಿಯೋ-ವಿಜುವಲ್ ವಿಧಾನದಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಅವರ ಕಲಿಕೆ ಸಾಮರ್ಥ್ಯ ಹೆಚ್ಚುವುದಲ್ಲದೆ, ಕಲಿತ ವಿಷಯಗಳನ್ನು ದೀರ್ಘಕಾಲದವರೆಗೆ ಮನಸ್ಸಿನಲ್ಲಿ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಯೋಜನೆ ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.

- Advertisement -

Latest News

error: Content is protected !!