Thursday, June 4, 2026
Homeತಾಜಾ ಸುದ್ದಿಜೈಲಿನಲ್ಲಿದ್ದೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ಜೀವಾವಧಿ ಶಿಕ್ಷಾ ಬಂಧಿ

ಜೈಲಿನಲ್ಲಿದ್ದೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾದ ಜೀವಾವಧಿ ಶಿಕ್ಷಾ ಬಂಧಿ

- Advertisement -
- Advertisement -

ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ಶಿಕ್ಷಾ ಬಂಧಿಯೋರ್ವ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾನೆ.

ಜೀವಾವಧಿ ಶಿಕ್ಷೆಗೊಳಗಾಗಿರುವ ಅಶೋಕ್ ಕುಮಾರ್ ಎಂಬ ಶಿಕ್ಷಾ ಬಂಧಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ‌ ಪರೀಕ್ಷೆ ಬರೆದು 600 ಅಂಕಗಳಿಗೆ 481 ಅಂಕಗಳನ್ನು ಪಡೆದು ಶೇಕಡಾ 81% ರಷ್ಟು ಫಲಿತಾಂಶದೊಂದಿಗೆ ಪಾಸಾಗಿದ್ದಾನೆ.

ಜೈಲಿನಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದ ಬಂಧಿ ಅಶೋಕ್ ಕುಮಾರ್
ಕನ್ನಡದಲ್ಲಿ 82, ಇಂಗ್ಲಿಷ್ ನಲ್ಲಿ 69, ಇತಿಹಾಸದಲ್ಲಿ 94, ಅರ್ಥಶಾಸ್ತ್ರದಲ್ಲಿ 84, ಸಮಾಜಶಾಸ್ತ್ರದಲ್ಲಿ 77 ಮತ್ತು ರಾಜ್ಯಶಾಸ್ತ್ರದಲ್ಲಿ 75 ಅಂಕಗಳನ್ನು ಪಡೆದಿದ್ದಾನೆ.

ಅಶೋಕ್ ಕುಮಾರ್
ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದು, ಕಳೆದ ಏಳು ವರ್ಷಗಳಿಂದ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

- Advertisement -

Latest News

error: Content is protected !!