Saturday, June 6, 2026
Homeಕೊಡಗುಕೊಡಗು: ಟ್ರಕ್ಕಿಂಗ್‌ ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಸುರಕ್ಷಿತವಾಗಿ ಪತ್ತೆ

ಕೊಡಗು: ಟ್ರಕ್ಕಿಂಗ್‌ ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಸುರಕ್ಷಿತವಾಗಿ ಪತ್ತೆ

- Advertisement -
- Advertisement -

ಕೊಡಗು: ಮೂರು ದಿನಗಳ ಹಿಂದೆ ಟ್ರಕ್ಕಿಂಗ್‌ ಗೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಶರಣ್ಯಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿತ್ತು. ಇಂದು ಶರಣ್ಯ ಪತ್ತೆಯಾಗಿದ್ದು ಶರಣ್ಯ ಅವರನ್ನು ಆದಿವಾಸಿಗಳು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.

ಚಾರಣಕ್ಕಾಗಿ ಕೇರಳದಿಂದ ಆಗಮಿಸಿದ್ದ ಯುವತಿ ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದರು. ಕಳೆದ ಗುರುವಾರ ಗೈಡ್ ಹಾಗೂ ಇತರ 15 ಚಾರಣಿಗರೊಂದಿಗೆ ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಂಡವಮೋಳ್ ಬೆಟ್ಟಕ್ಕೆ ತೆರಳಿದ್ದರು. ಗುರುವಾರ ಕೊನೆಯದಾಗಿ ದೂರವಾಣಿ ಮೂಲಕ ಹೋಂ ಸ್ಟೇ ಸಂಪರ್ಕಿಸಿದ ಶರಣ್ಯ ತಾನು ದಾರಿ ತಪ್ಪಿದ್ದಾಗಿ ತಿಳಿಸಿದ್ದರು. ವಿಷಯ ತಿಳಿದ ಕೂಡಲೇ ಪೊಲೀಸರು, ನಕ್ಸಲ್ ನಿಗ್ರಹ ದಳ ಹಾಗೂ ಶ್ವಾನದಳ ಹಾಗೂ ಅರಣ್ಯ ಸಿಬ್ಬಂದಿ ಸೇರಿದಂತೆ 50 ಜನರ ಐದು ತಂಡಗಳು ಶೋಧ ಕಾರ್ಯ ಕೈಗೊಂಡಿದ್ದರು. ಇದೀಗ ಆಕೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. 

- Advertisement -

Latest News

error: Content is protected !!