Wednesday, June 3, 2026
Homeಕರಾವಳಿನ್ಯಾಯಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭದ ಮುಂದೆ ಕುಳಿತುಕೊಳ್ಳುತ್ತೇನೆ; ಸಂತ್ರಸ್ತೆಯ ತಾಯಿಯಿಂದ ಹೋರಾಟದ ಕರೆ

ನ್ಯಾಯಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭದ ಮುಂದೆ ಕುಳಿತುಕೊಳ್ಳುತ್ತೇನೆ; ಸಂತ್ರಸ್ತೆಯ ತಾಯಿಯಿಂದ ಹೋರಾಟದ ಕರೆ

- Advertisement -
- Advertisement -

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭದ ಮುಂದೆ ನನ್ನ ಮಗಳ ವಿಚಾರದಲ್ಲಿ ನ್ಯಾಯ ಕುಳಿತುಕೊಳ್ಳುತ್ತೇನೆ ಎಂದು ಸಂತ್ರಸ್ತೆ ತಾಯಿ ನಮಿತಾ ಹೇಳಿಕೆಯನ್ನ ನೀಡಿದ್ದಾರೆ.

ಅವರು ಇಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನನ್ನ ಮಗಳಿಗೆ ಅನ್ಯಾಯವಾಗಿ ಒಂದು ವರ್ಷ ಕಳೆದಿದ್ದು, ನ್ಯಾಯಕ್ಕಾಗಿ ನಾನು ಹೋರಾಡುತ್ತಲೇ ಇದ್ದೇನೆ. ಆದರೆ ಜಗನ್ನಿವಾಸ್ ರಾವ್ ಅವರು ಈಗಲೂ ಧಾರ್ಮಿಕ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರು  ಆದರೆ ಇಲ್ಲಿಯವರೆಗೂ ತನ್ನ ಮಗನಿಂದ ಓರ್ವ ಹೆಣ್ಣು ಮಗಳಿಗೆ ಆದ ಅನ್ಯಾಯದ ಬಗ್ಗೆ ಗಮನಹರಿಸುತ್ತಿಲ್ಲ. ಈ ಹಿಂದೆ ಕೃಷ್ಣ ಜೆ ರಾವ್ ಹಾಗೂ ಸಂತ್ರಸ್ತೆಗೆ ಮದುವೆ ಮಾಡಿಸುವುದಾಗಿ ಪಿಜಿ. ಜಗನ್ನಿವಾಸ ರಾವ್ ಅವರು ಹೇಳಿದ್ದರು. ಮುಚ್ಚಳಿಕೆ ಪತ್ರ ಬರೆದುಕೊಟ್ಟಾಗ ಕೂಡ ಮದುವೆ ಮಾಡಿಸುವ ಜವಾಬ್ದಾರಿ ನನ್ನದು. ಮನೆಯಲ್ಲಿ ನನ್ನ ತೀರ್ಮಾನವೇ ಅಂತಿಮ ಎಂದು ಹೇಳಿದ್ದರು. ಸಂತ್ರಸ್ತೆಗೆ 9 ತಿಂಗಳು ಆಗುವವರೆಗೂ ಹಾಗೆಯೇ ಹೇಳಿ ನಮ್ಮ ದಾರಿ ತಪ್ಪಿಸುತ್ತಿದ್ದರು. ಆದರೆ ಈಗ ಮಗುವಿಗೆ 10 ತಿಂಗಳು ಆಗುತ್ತಾ ಬಂದಿದೆ. ಆದರೆ ಕೃಷ್ಣ ಹಾಗೂ ಸಂತ್ರಸ್ತೆಗೆ ಮದುವೆ ಮಾಡಲು ಪಿಜಿ ಜಗನ್ನಿವಾಸ ರಾವ್ ಅವರು ಮುಂದೆ ಬಂದಿಲ್ಲ. ಇಷ್ಟೆಲ್ಲ ಆದರೂ ನಾನು ಇಲ್ಲಿಯವರೆಗೂ ಅವರು ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡುವ ಕೆಲಸಕ್ಕೆ ಮಾತನಾಡಿಲ್ಲ. ಆದರೆ ಇನ್ನು ಮುಂದೆ ಪಿ.ಜಿ. ಜಗನ್ನಿವಾಸ ರಾವ್ ಅವರನ್ನ ಧಾರ್ಮಿಕ ಕ್ಷೇತ್ರದ ಯಾವ ಚಟುವಟಿಕೆಗಳಲ್ಲೂ ಸೇರಿಸಿಕೊಳ್ಳಬೇಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಮ್ಮ ಸಂಕಟವನ್ನು ವ್ಯಕ್ತಪಡಿಸಿದರು.

ಎಪ್ರಿಲ್ 10ರಂದು ಪುತ್ತೂರು ಜಾತ್ರೋತ್ಸವದ ಧ್ವಜಾರೋಹಣ ಆಗುವ ಸಂದರ್ಭದಲ್ಲಿ ಧ್ವಜಸ್ತಂಭದ ಮುಂದೆಯೇ ಕುಳಿತುಕೊಳ್ಳುತ್ತೇನೆ. ನ್ಯಾಯಕ್ಕಾಗಿ ತಂತ್ರಿಯವರಲ್ಲಿ ಕೇಳಿಕೊಳ್ಳುತ್ತೇನೆ. ಇನ್ನು ದೇವರಲ್ಲದೇ ಬೇರೆ ಯಾರೂ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಅವರ ಮಗ ಮಾಡಿದ ತಪ್ಪಿಗೆ ದೇವಸ್ಥಾನದ ಧ್ವಜಸ್ತಂಭದ ಮುಂದೆ ಎಲ್ಲರಲ್ಲೂ ನ್ಯಾಯಕೊಡಿಸುವಂತೆ ಕೇಳುತ್ತೇನೆ ಎಂದು ಹೇಳಿದರು. ಸಂಕಟವನ್ನು ವ್ಯಕ್ತಪಡಿಸಿದರು.

- Advertisement -

Latest News

error: Content is protected !!