- Advertisement -
![]()
- Advertisement -
ಬೆಳ್ತಂಗಡಿ :ರಬ್ಬರ್ ಟ್ಯಾಪಿಂಗ್ ಗೆಂದು ಬಂದ ಕಾರ್ಮಿಕ ಮೈಮೇಲೆ ವಿದ್ಯುತ್ ಹರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಂಗಡಿ ಗ್ರಾಮದ ಪಾರ್ದೊಟ್ಟು ಎಂಬಲ್ಲಿ ನಡೆದಿದೆ. ಕೇರಳ ಮೂಲದ ಕಾರ್ಮಿಕ ಜೋಸೆಫ್ ತೋಮಸ್ (69) ಮೃತ ವ್ಯಕ್ತಿ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತ ಹೊಸಂಗಡಿಯ ಶಾಜು.ಪಿ.ಟಿ ಎಂಬವರ ರಬ್ಬರ್ ತೋಟದಲ್ಲಿ ಕರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದು ಈತನ ಮೃತದೇಹ ಮಾ. 30ರಂದು ಸಂಜೆಯ ವೇಳೆ ಶಾಜು ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಕಂಡು ಬಂದಿದೆ.
ಮನೆಯ ಅಡುಗೆ ಕೋಣೆಯ ವಿದ್ಯುತ್ ಸ್ವಿಚ್ ಬೋರ್ಡ್ ಗೆ ಪ್ಲಗ್ ಸಿಕ್ಕಿಸಿ ಕಾಲಿಗೆ ವಯರ್ ಕನೆಕ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಂತೆ ಕಂಡು ಬಂದಿದ್ದು ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Advertisement -


