Monday, June 8, 2026
Homeಕರಾವಳಿಮಂಗಳೂರುಮಂಗಳೂರು:  ಅಪಾರ್ಟ್ ಮೆಂಟ್ ನ 12ನೇ ಫ್ಲೋರ್ ನಿಂದ ಹಾರಿ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು:  ಅಪಾರ್ಟ್ ಮೆಂಟ್ ನ 12ನೇ ಫ್ಲೋರ್ ನಿಂದ ಹಾರಿ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಮಂಗಳೂರು:  ಅಪಾರ್ಟ್ ಮೆಂಟ್ ನ 12ನೇ ಫ್ಲೋರ್ ನಿಂದ ಹಾರಿ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅತ್ತಾವರದಲ್ಲಿ ನಡೆದಿದೆ. ಉತ್ತರ ಭಾರತ ಮೂಲದ ಸಾರ್ಥಕ್‌ ಮೌರ್ಯ (23) ಮೃತ ವಿದ್ಯಾರ್ಥಿ.

ಕೆಎಂಸಿ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಾರ್ಥಕ್‌, ಸೋಮವಾರ ಸಂಜೆ ಅತ್ತಾವರದ ಗೆಳತಿಯೊಬ್ಬಳ ಮನೆಯಿದ್ದ ಅಪಾರ್ಟ್ಮೆಂಟಿಗೆ ಬಂದಿದ್ದು, 12ನೇ ಮಹಡಿಗೆ ತೆರಳಿ ಅಲ್ಲಿಂದ ಹಾರಿದ್ದಾನೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಸಾರ್ಥಕ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸಾರ್ಥಕ್‌ ಅತ್ತಾವರದ ಪಿಜಿಯಲ್ಲಿ ವಾಸವಿದ್ದು, ಮಾರ್ಚ್‌ 31ರಿಂದ ಪರೀಕ್ಷೆ ನಡೆಯಲಿಕ್ಕಿತ್ತು. ಅಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!