- Advertisement -
![]()
- Advertisement -
ಮಂಗಳೂರು: ಐಎಂಎಸ್‌ಸಿ. ಮೋಟಾರ್ ಸ್ಪೋರ್ಟ್ಸ್ನ 25ನೇ ವರ್ಷದ ಸಂಭ್ರಮದ ಅಂಗವಾಗಿ 400ನೇ ಸ್ಪರ್ಧೆಯಾಗಿ ಪ್ರತಿಷ್ಠಿತ ಆಫ್ ರೋಡ್ ಟ್ರೋಪಿ 2020ನ್ನು ಮಾ.28, 29ರಂದು ಮಂಗಳೂರು ಸಮೀಪದ ಒಡ್ಡೂರು ಫಾರ್ಮ್ಸ್ನಲ್ಲಿ ಆಯೋಜಿಸಿದೆ.
ಸ್ಪರ್ಧೆಯಲ್ಲಿ ವಿಭಾಗಗಳಲ್ಲಿ 140ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸುಮಾರು 3,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯಿದೆ.
ಈ ಬಾರಿ ವಿಜೇತರಿಗೆ ಒಟ್ಟು 15 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಟ್ರೋಪಿ ಮತ್ತು ಗಿಫ್ಟ್ ನೀಡಲಾಗುತ್ತಿದ್ದು, ಇದು ಈ ಸ್ಪರ್ಧೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ.
ವಿಧಾನಸಭೆ ಸ್ಪೀಕರ್.ಯು.ಟಿ.ಖಾದರ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಲವಾರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು
- Advertisement -


