- Advertisement -
![]()
- Advertisement -
ಬೆಳ್ತಂಗಡಿ : ಹಲವಾರು ಮಹಿಳೆಯರು ಮಾಡಿದ ಆರೋಪಗಳ ಮೇಲೆ ಅಮಾನತುಗೊಂಡಿದ್ದ ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಗಿದ್ದ ಸಂದೇಶ್.ಪಿ.ಜಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಮಾ.21 ರಂದು ಮುಖ್ಯ ಶಿಕ್ಷಕಿಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಫೈಲ್ ಸಿಐಡಿಗೆ ಅಧಿಕೃತವಾಗಿ ವರ್ಗಾವಣೆ ಮಾಡಲಾಗಿದೆ.
ವೇಣೂರು ಪೊಲೀಸ್ ಠಾಣೆಯ ಎಎಸ್ಐ ವೆಂಕಟೇಶ್ ಅವರು ಮಾ.25 ರಂದು ಬೆಂಗಳೂರು ಸಿಐಡಿ ಕಚೇರಿಗೆ ತೆರಳಿ ಇನ್ಸ್‌ಪೆಕ್ಟರ್ ಸಂದೇಶ್.ಪಿ.ಜಿ ಅತ್ಯಾಚಾರ ಪ್ರಕರಣದ ಫೈಲ್ ಹಸ್ತಾಂತರ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಹಾಎಕ್ಸ್ಪ್ರೆಸ್ ಗೆ ಮಾಹಿತಿ ಲಭ್ಯವಾಗಿದೆ.
- Advertisement -


