Friday, June 5, 2026
Homeಕರಾವಳಿಮಂಗಳೂರುಕಡಬ: ತಲೆನೋವೆಂದು ಮನೆಯಲ್ಲಿದ್ದ ಔಷಧಿ ಸೇವಿಸಿದ 10 ವರ್ಷದ ಬಾಲಕ ಸಾವು

ಕಡಬ: ತಲೆನೋವೆಂದು ಮನೆಯಲ್ಲಿದ್ದ ಔಷಧಿ ಸೇವಿಸಿದ 10 ವರ್ಷದ ಬಾಲಕ ಸಾವು

- Advertisement -
- Advertisement -

ಕಡಬ: ತಲೆನೋವೆಂದು ಮನೆಯಲ್ಲಿದ್ದ ಔಷಧಿ ಸೇವಿಸಿದ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಡಬದ ರಾಮಕುಂಜ ಎಂಬಲ್ಲಿ ನಡೆದಿದೆ. ಇಲ್ಲಿನ ಸಂಜೀವ ಪೂಜಾರಿ (50) ಎಂಬವರ 10 ವರ್ಷದ ಮಗನಿಗೆ ಪದೇಪದೇ ತಲೆನೋವು ಬರುತ್ತಿದ್ದು,  ದಿನಾಂಕ 18.03.2026 ರಂದು ಸಂಜೆ ಆತ ತಲೆನೋವಿಗೆಂದು ಮನೆಯಲ್ಲಿದ್ದ  ಔಷಧಿಯನ್ನು ಸೇವಿಸಿ ಮನೆಯಲ್ಲಿ ಹೊರಳಾಡುತ್ತಿರುವುದಾಗಿ ಸಂಜೀವ ಅವರ ಪತ್ನಿ ತಿಳಿಸಿದ್ದಾರೆ. ಕೂಡಲೇ ಸಂಜೀವ ಮನೆಗೆ ಬಂದು ಮಗನನ್ನು ಸ್ಥಳೀಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆ ತಂದಿದ್ದಾರೆ. ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಡಬ ಪೊಲೀಸ್‌‌ ಠಾಣೆಯಲ್ಲಿ ಯು ಡಿ ಆರ್‌ ನಂಬ್ರ: 10/2026 ಕಲಂ: 194 BNSS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!