ಮಂಗಳೂರು; ಫಲ್ಗುಣಿ ನದಿಯ ದಡದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಿ ಗೋಮಾಂಸ ಮಾಡುತ್ತಿದ್ದಾಗ ಪೊಲೀಸರ ದಾಳಿ ನಡೆಸಿದಾಗ ಐವರು ಆರೋಪಿಗಳು ಪರಾರಿಯಾಗಿರುವ ಘಟನೆ ಮಂಗಳೂರು ತಾಲೂಕು ಕಸಬಾ ಬೆಂಗ್ರೆ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯ ಬಳಿ ಅಹಮ್ಮದ್ ಎಂಬವರ ಮನೆಯ ಹಿಂಭಾಗದಲ್ಲಿ ಫಲ್ಗುಣಿ ನದಿಯ ದಡದಲ್ಲಿ ನಡೆದಿದೆ.
ದಿನಾಂಕ: 18.03.2026 ರಂದು ಬೆಳಗ್ಗೆ 9.15 ಗಂಟೆಗೆ ಮಂಗಳೂರು ತಾಲೂಕು ಕಸಬಾ ಬೆಂಗ್ರೆ ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯ ಬಳಿ ಅಹಮ್ಮದ್ ಎಂಬವರ ಮನೆಯ ಹಿಂಭಾಗದಲ್ಲಿ ಫಲ್ಗುಣಿ ನದಿಯ ದಡದಲ್ಲಿ ನಿರ್ಮಿಸಿರುವ ಶೆಡ್ ನಲ್ಲಿ 4-5 ಜನರು ಸೇರಿಕೊಂಡು ಜಾನುವಾರುಗಳನ್ನು ಅಕ್ರಮವಾಗಿ ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯನ್ನಾಧರಿಸಿ, ಎಸಿಪಿ ಶ್ರೀಕಾಂತ್ , ಪಿಐ ಸಲೀಂ ಅಬ್ಬಾಸ್‌ರವರ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪಿಎಸ್ಐ ರವರಾದ ಶ್ರೀಮತಿ ಶ್ರೀಕಲಾ ಮತ್ತು ಸಿಬ್ಬಂದಿ ದಾಳಿ ಮಾಡಿ ಅಲ್ಲಿ, ಅಕ್ರಮವಾಗಿ ವಧೆ ಮಾಡಲು ಕಟ್ಟಿ ಹಾಕಿದ್ದ 09 ಜಾನುವಾರಗಳನ್ನು ಹಾಗೂ ಈಗಾಗಲೇ ವಧೆ ಮಾಡಿ ಮಾರಾಟ ಮಾಡಲು ಸಂಗ್ರಹಿಸಿದ್ದ 205 ಕೆ.ಜೆ ಜಾನುವಾರು ಮಾಂಸ ಮತ್ತು ವಧೆ ಮಾಡಲು ಉಪಯೋಗಿಸಿದ ಪರಿಕರಗಳನ್ನು ಸ್ವಾಧಿಪಡಿಸಿಕೊಳ್ಳಲಾಗಿರುತ್ತದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಕಸಬಾ ಬೆಂಗ್ರೆಯ ಕಬೀರ್ ಅಲಿಯಾಸ್ ಪೆತ್ತ ಕ ಬೀರ್,ಜೋಕಟ್ಟೆ ವಾಸಿ ಬದ್ರು ಅಲಿಯಾಸ್ ಬದ್ರುದ್ದೀನ್ ಮತ್ತು ಇತರ 03 ಜನ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿದ್ದಾರೆ. ಆರೋಪಿಗಳ ವಿರುದ್ದ ಪಣಂಬೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 42/2026 ಕಲಂ-303(2) BNS, ಕಲಂ 4,7,12 THE KARNATAKA PREVENTION OF SLAUGHTER AND PRESERVATION OF CATTLE ACT-2020 & ಕಲಂ 11 PREVENTION OF CRUELTY TO ANIMALS ACT ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.


