Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20  ವರ್ಷ ಜೈಲು ಶಿಕ್ಷೆ...

ಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20  ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಮಹತ್ವದ ತೀರ್ಪು

- Advertisement -
- Advertisement -

ಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20  ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಅಬೂಬಕ್ಕರ್‌ (50) ಎಂಬಾತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಅ ಕ್ರ 135/25, ಕಲಂ: 64 (1), 351(2) BNS ಮತ್ತು 4 (2)   OF CHILDRENFROM SEXUAL OFFENCES ACT 2012 ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ  ತನಿಖೆ ನಡೆಸಿದ ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಶಿವಕುಮಾರ ಬಿ  ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಆರೋಪಿಯ ವಿರುದ್ದ ದೋಷಾರೋಪಣವನ್ನು ಸಲ್ಲಿಸಿದ್ದರು. ಮಂಗಳೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದು, ದಿನಾಂಕ 7.03.2026 ರಂದು ಆರೋಪಿಯನ್ನು ದೋಷಿ ಎಂಬುದಾಗಿ ಆದೇಶವಾಗಿದ್ದು,  ಆರೋಪಿಗೆ 20  ವರ್ಷ ಶಿಕ್ಷೆ & 50,000 ಸಾವಿರ ದಂಡ  ವಿಧಿಸಿ ಶಿಕ್ಷೆ ಫೋಷಣೆಯಾಗಿದೆ.

 ಪ್ರಕರಣದಲ್ಲಿ  ಶ್ರೀಮತಿ ಸಹನದೇವಿ ರವರು ವಿಶೇಷ ಸರಕಾರಿ ಅಭಿಯೋಜಕರಾಗಿ  ಸಮರ್ಥವಾಗಿ ವಾದಮಂಡನೆ ನಡೆಸಿರುತ್ತಾರೆ. ಪ್ರಕರಣದ ತನಿಖಾ ಸಹಾಯಕರಾಗಿ ಬಂಟ್ವಾಳ ಗ್ರಾಮಾಂತರ ಠಾಣಾ ಹೆಚ್ ಸಿ 345  ಪ್ರಶಾಂತ   ಕುಮಾರ್ ಹಾಗೂ ನ್ಯಾಯಾಲಯ ಕರ್ತವ್ಯ ಸಿಬ್ಬಂದಿಯಾಗಿ  ಪಿಸಿ 445  ಸಂತೋಷ ಡಿ ಜಾಧವ ರವರು  ಸಹಕರಿಸಿರುತ್ತಾರೆ..

- Advertisement -

Latest News

error: Content is protected !!