Wednesday, June 3, 2026
Homeತಾಜಾ ಸುದ್ದಿಮಂಗಳೂರು: ಕೆಐಒಸಿಎಲ್ ನಿಂದ ಬೈಕಂಪಾಡಿವರೆಗೆ ಎಲಿವೇಟೆಡ್ ರೋಡ್ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ...

ಮಂಗಳೂರು: ಕೆಐಒಸಿಎಲ್ ನಿಂದ ಬೈಕಂಪಾಡಿವರೆಗೆ ಎಲಿವೇಟೆಡ್ ರೋಡ್ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ ಬ್ರಿಜೇಶ್ ಚೌಟ ಮನವಿ

- Advertisement -
- Advertisement -

ನವದೆಹಲಿ: ಮಂಗಳೂರಿನ ಕೆಐಒಸಿಎಲ್‌ ನಿಂದ ಬೈಕಂಪಾಡಿಯವರೆಗೆ ಎಲಿವೇಟೆಡ್ ರೋಡ್ ನಿರ್ಮಿಸುವಂತೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಅವರಿಗೆ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಗುರುವಾರ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಬ್ರಿಜೇಶ್ ಚೌಟ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಈ ವೇಳೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಗಾರಿಕೆ ಮತ್ತು ಬಂದರಿಗೆ ಬರುವ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಕೆಐಒಸಿಎಲ್ ನಿಂದ ಬೈಕಂಪಾಡಿವರೆಗೆ ಮೇಲ್ಸೇತುವೆ ನಿರ್ಮಿಸುವಂತೆ ಪ್ರಮುಖವಾಗಿ ಮನವಿ ಮಾಡಲಾಗಿದೆ.

ಇದರ ಜೊತೆಗೆ, ಮಾಣಿ–ಸಂಪಾಜೆ ರಸ್ತೆಯ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸುವ ಬಗ್ಗೆಯೂ ಕೇಂದ್ರ ಸಚಿವರ ಗಡ್ಕರಿ ಜೊತೆಗೆ ಸಂಸದ ಚೌಟ ಚರ್ಚೆ ನಡೆಸಿದ್ದಾರೆ.

- Advertisement -

Latest News

error: Content is protected !!