Thursday, June 4, 2026
HomeWorldಇರಾನ್‌ ಸಚಿವರೊಂದಿಗೆ ವಿದೇಶಾಂಗ ಸಚಿವ ಜೈಶಂಕರ್‌ ಮಾತುಕತೆ; ಭಾರತದ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿ ಬಳಸಲು...

ಇರಾನ್‌ ಸಚಿವರೊಂದಿಗೆ ವಿದೇಶಾಂಗ ಸಚಿವ ಜೈಶಂಕರ್‌ ಮಾತುಕತೆ; ಭಾರತದ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿ ಬಳಸಲು ಅವಕಾಶ ನೀಡಿದ ಇರಾನ್

- Advertisement -
- Advertisement -

ಭಾರತ ದೇಶವು ಮಧ್ಯಪ್ರಾಚ್ಯ ದೇಶಗಳೊಂದಿಗೆ ಹೊಂದಿರುವಂತಹ ರಾಜತಾಂತ್ರಿಕ ಸಂಬಂಧ ಗುರುವಾರ ಫಲ ನೀಡಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ಸಚಿವ ಅಬ್ಬಾಸ್ ಅರಘ್ಚಿ ನಡುವಿನ ಮಾತುಕತೆಯೇ ಇದಕ್ಕೆ ಸಾಕ್ಷಿಯಾಗಿದೆ.

ಭಾರತದಲ್ಲಿ ಈಗಾಗಲೇ ತೈಲದ ಕುರಿತು ಉದ್ದಿಗ್ನತೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ಭಾರತದ ತೈಲ ಟ್ಯಾಂಕರ್‌ಗಳಿಗೆ ಆಯಕಟ್ಟಿನ ನಿರ್ಣಾಯಕ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಇರಾನ್ ಅವಕಾಶ ನೀಡಿದೆ.

ದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ಸಚಿವ ಅಬ್ಬಾಸ್ ಅರಘ್ಚಿ  ನಡುವಿನ ಮಾತುಕತೆಯ ಮುಖ್ಯ ಅಂಶಗಳು:
> ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತದ ಇಂಧನ ಸರಬರಾಜುಗಳು ಅಡೆತಡೆಯಿಲ್ಲದೆ ಇರುವಂತೆ ನೋಡಿಕೊಳ್ಳುವ ಗುರಿ.
> ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಕಡಲ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾಗಿದ್ದು, ಇದರ ಮೂಲಕ ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ
> ಸಾಗಣೆ, ಆಮದುಗಳಿಗೆ ಸುರಕ್ಷಿತ ಮಾರ್ಗ ಖಚಿತಪಡಿಸಿಕೊಳ್ಳಲು ಕ್ರಮ
> ಭಾರತೀಯ ಹಡಗುಗಳಿಗೆ ಸಮುದ್ರ ಮಾರ್ಗವನ್ನು ಮುಕ್ತವಾಗಿರಿಸುವುದು

ರಷ್ಯಾದ ಸೆರ್ಗೆಯ್ ಲಾವೊವ್ ಮತ್ತು ಫ್ರಾನ್ಸ್‌ನ ಜೀನ್-ನೋಲ್ ಬ್ಯಾರಟ್ ಅವರೊಂದಿಗೆ ವಿದೇಶಾಂಗ ಸಚಿವರು, ಪ್ರದೇಶದ ನಿರ್ಣಾಯಕ ಹಡಗು ಮಾರ್ಗಗಳಲ್ಲಿ ಹೆಚ್ಚುತ್ತಿರುವ ಪರಿಸ್ಥಿತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಪ್ರಯತ್ನಗಳ ಕುರಿತು ಚರ್ಚಿಸಿದರು ಎಂದು ವರದಿಯಾಗಿದೆ.

- Advertisement -

Latest News

error: Content is protected !!