ಕೇರಳ: ಕಳೆದ ವರ್ಷ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಲಿಸಾ ಭೋಸ್ಲೆ ಸೋಷಿಯಲ್ ಮೀಡಿಯಾದಲ್ಲಿ ಯಾವ ರೀತಿ ವೈರಲ್ ಆಗಿದ್ರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಇದಾದ ಬಳಿಕ ಮೊನಲೀಸಾ ಬದುಕೇ ಬದಲಾಯ್ತು. ಮೊನಾಲೀಸ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಹೀಗಿರುವಾಗಲೇ ಇದೀಗ ಮತ್ತೆ ಮೊನಲಿಸಾ ಸುದ್ದಿಯಲ್ಲಿದ್ದಾರೆ.
ಹೌದು.. ಮೊನಾಲೀಸಾ ಭೋಸ್ಲೆ ದಿಢೀರ್ ಅಂತಾ ಕೇರಳದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನಿಸಲಾ ಭೋಸ್ಲೆ ಪ್ರಸ್ತುತ ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದರು. ಆದರೆ ಇದೀಗ ಅವರು ತಿರುವನಂತಪುರದ ಥಂಪನೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ತಮ್ಮ ಪೋಷಕರ ವಿರುದ್ಧವೇ ದೂರು ನೀಡಿದ್ದರು. ತಮ್ಮ ಪೋಷಕರು ತಮಗೆ ಬಲವಂತದ ಮದುವೆ ಮಾಡಲು ಯತ್ನಿಸುತ್ತಿದ್ದು, ಈ ಬಲವಂತದ ಮದುವೆಯಿಂದ ತಮಗೆ ರಕ್ಷಣೆ ಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೂಲತಃ ಮಧ್ಯಪ್ರದೇಶದ ಇಂದೋರ್‌ನವರಾದ ಮೊನಾಲಿಸಾ ಭೋಂಸ್ಲೆ, ಮಹಾರಾಷ್ಟ್ರ ನಟ, ಮಾಡೆಲ್ ಫರ್ಮಾನ್ ಖಾನ್ ಎಂಬುವರನ್ನು ಪ್ರೀತಿಸಿದ್ದು, ಅವರೊಟ್ಟಿಗೆ ಮದುವೆ ಆಗುವುದಾಗಿ ಹೇಳಿದ್ದಾರೆ. ಆದರೆ ಅವರ ಪೋಷಕರು ಮೋನಸಿಲಾಗೆ ಬೇರೆ ಮದುವೆ ಮಾಡಲು ನಿರ್ಧರಿಸಿದ್ದು, ತಾವು ನೋಡಿದ ವರನೊಡನೆ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾರಂತೆ. ಇದೇ ಕಾರಣಕ್ಕೆ ಅವರು ತಮ್ಮ ಬಾಯ್ಫ್ರೆಂಡ್ ಜೊತೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.
ಮೊನಾಲಿಸಾ ಮತ್ತು ಮಹಾರಾಷ್ಟ್ರ ಮೂಲದ ಫರ್ಮಾನ್ ಖಾನ್ ಕಳೆದ 6 ತಿಂಗಳಿಂದ ಪ್ರೀತಿಸುತ್ತಿದ್ದಾರೆ. ಇವರ ಅಂತರ್ಧರ್ಮೀಯ ವಿವಾಹಕ್ಕೆ ಮೊನಾಲಿಸಾ ಅವರ ತಂದೆ ವಿಜಯ್ ಸಿಂಗ್ ಭೋಂಸ್ಲೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು . ಪೊಲೀಸರ ಮುಂದೆ ದೂರು ನೀಡಿರುವ ಮೊನಲಿಸಾ, ತಮಗೆ ಯಾವುದೇ ದೈಹಿಕ ಹಿಂಸೆ ನಡೆದಿಲ್ಲವಾದರೂ, ಮಾನಸಿಕವಾಗಿ ಒತ್ತಡ ಹೇರುತ್ತಿರುವುದರಿಂದ ತಮಗೆ ರಕ್ಷಣೆ ಬೇಕೆಂದು ಅವರು ಕೇಳಿಕೊಂಡಿದ್ದರು.ಅದಾದ ಬೆನ್ನಲ್ಲೇ ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್ ದೇಗುಲದಲ್ಲಿ ನಿನ್ನೆ ಸಂಜೆ ಇಬ್ಬರು ವಿವಾಹವಾಗಿದ್ದಾರೆ. ಕೇರಳದ ಸಚಿವ ವಿ.ಶಿವನ್ ಕುಟ್ಟಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಭಾಗಿಯಾಗಿದ್ದರು.


