Saturday, June 6, 2026
Homeಕರಾವಳಿಉಡುಪಿಉಡುಪಿ: ಕೊರಿಯರ್ ನಲ್ಲಿ ಬಂದ ಗಿಫ್ಟ್ ಆಸೆಗೆ 14 ಲಕ್ಷ ಕಳೆದುಕೊಂಡ ಮಹಿಳೆ

ಉಡುಪಿ: ಕೊರಿಯರ್ ನಲ್ಲಿ ಬಂದ ಗಿಫ್ಟ್ ಆಸೆಗೆ 14 ಲಕ್ಷ ಕಳೆದುಕೊಂಡ ಮಹಿಳೆ

- Advertisement -
- Advertisement -

ಉಡುಪಿ: ಕೊರಿಯರ್ ನಲ್ಲಿ ಬಂದ ಗಿಫ್ಟ್ ಆಸೆಗೆ ಮಹಿಳೆಯೊಬ್ಬರು 14 ಲಕ್ಷ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ದೂರುದಾರ ಮಹಿಳೆಗೆ ಮೊಬೈಲ್ ನಲ್ಲಿ ವಿದೇಶದಲ್ಲಿದ್ದ ವ್ಯಕ್ತಿಯೊಬ್ಬರು ಪರಿಚಯವಾಗಿದೆ. ಆತನ ತನ್ನ ಹೆಸರಿನಲ್ಲಿ ಗಿಪ್ಟ್‌ ಕೋರಿಯರ್‌ ಮಾಡಿರುತ್ತೇನೆ ಎಂದು ದಿನಾಂಕ 22/02/2026 ರಂದು ತಿಳಿಸಿ ಅದರ ಛಾಯಾಚಿತ್ರವನ್ನು ವಾಟ್ಸಾಪ್ ನಲ್ಲಿ ಕಳುಹಿಸಿಕೊಟ್ಟಿದ್ದಾನೆ. ಬಳಿಕ . ದಿನಾಂಕ: 23/02/2026 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಹಿಳೆ ಕೆಲಸದಲ್ಲಿರುವ ಸಮಯದಲ್ಲಿ ಮೊಬೈಲ್‌ ಗೆ ಒಬ್ಬಾಕೆಯು ಕರೆ ಮಾಡಿ ನಿಮಗೆ ವಿದೇಶದಿಂದ ನಿಮ್ಮ ಹೆಸರಿನಲ್ಲಿ ಕೋರಿಯರ್‌ ಬಂದಿರುತ್ತದೆ. ಈ ಕೋರಿಯರ್‌ ವಿಮಾನ ನಿಲ್ದಾಣದಿಂದ ಹೊರಗಡೆ ಬರಬೇಕಾದರೆ ನೀವು 49,700/- ಹಣವನ್ನು ಹಾಕುವಂತೆ ತಿಳಿಸಿದ್ದಾರೆ. ಮಹಿಳೆ ಅವರು ತಿಳಿಸಿದ ಐಡಿಬಿಐ ಬ್ಯಾಂಕ್‌ ದೆಹಲಿ ಖಾತೆ ಗೆ ದಿನಾಂಕ:23/02/2026 ರಂದು ಕೆನರ ಬ್ಯಾಂಕ್‌ ಉಡುಪಿ ಬ್ರಾಂಚ್‌ ಮುಖೇನ ಕಳುಹಿಸಿರುತ್ತಾರೆ. ಬಳಿಕ ಸ್ವಲ್ಪ ಸಮಯದ ಬಳಿಕ ಕೋರಿಯರ್‌ ಚೆಕ್ಕಿಂಗ್‌ ಆಗಲು ಇದೆ ಎಂದು ತಿಳಿಸಿದರು. ಈ ಕೋರಿಯರ್‌ನಲ್ಲಿ 30,000/- ನೊತ್ತದ ವಿದೇಶದ ಪೌಂಡ್‌ ಇದೆ ಈ ರೀತಿ ವಿದೇಶ ಹಣವನ್ನು ಕೋರಿಯರ್‌ನಲ್ಲಿ ಕಳುಹಿಸಿರುವುದು ಕಾನೂನು ಬಾಹಿರವಾಗಿರುತ್ತದೆ. ಇದಕ್ಕೆ ನೀವು ಕೂಡಲೇ 1,89,000/- ಹಣವನ್ನು ಹಾಕುವಂತೆ ತಿಳಿಸಿ ಮೂರು ಖಾತೆ ನಂಬ್ರ ನೀಡಿದ್ದು ಒಟ್ಟು 1,89,000/- ಹಣವನ್ನು ಕಳುಹಿಸಿದ್ದಾರೆ.

ಬಳಿಕ ಅದೇ ದಿನದಂದು ಸಂಜೆ ಕರೆ ಮಾಡಿ ಮನಿ ಎಕ್ಸ್‌ಚೇಂಜ್‌ ಮಾಡಲು ಹೆಚ್ಚುವರಿ ಹಣ ಕಳುಹಿಸುವಂತೆ ತಿಳಿಸಿದ್ದಾರೆ. ಅದರಂತೆ ಕ್ರಮವಾಗಿ 62,500/- ರಂತೆ ಒಟ್ಟು 2,50,000/- ಹಣವನ್ನು ಕಳುಹಿಸಿಕೊಟ್ಟಿದ್ದು. ಬಳಿಕ ಕರೆ ಮಾಡಿ ಡೋಕ್ಯುಮೆಂಟೇಶನ್‌ ಮಾಡಲು ಹಣ ಕಳುಹಿಸುವಂತೆ ತಿಳಿಸಿದ್ದು ಹೀಗೆ ಹಲವು ಬಾರಿ ಒಟ್ಟು ದಿನಾಂಕ:23/02/2026 ರಿಂದ ದಿನಾಂಕ:27/02/2026 ರವರೆಗೆ ಒಟ್ಟು ಮೊತ್ತ 13,99,700/- ಹಣವನ್ನು ಆಕೆಯು ತಿಳಿಸಿದಂತೆ ಬೇರೆ ಬೇರೆ ಖಾತೆಗೆ ಹಣವನ್ನು ಕಳುಹಿಸಿಕೊಟ್ಟಿದ್ದಾರೆ.

ಬಳಿಕ ತಾನು ವಿದೇಶದಲ್ಲಿರುವ ಸ್ನೇಹಿತ ಮಿಲರ್‌ ಗೇರ್‌ ಹಾರ್ಡ್‌ ಈತನಿಗೆ ಕರೆ ಮಾಡಿ ವಿಚಾರಿಸಿದಾಗ ತಾನು ಕಳುಹಿಸಿದ ಕೋರಿಯರ್‌ನಲ್ಲಿ ವಿದೇಶದ 30,000/- ಪೌಂಡ್‌ ಹಣವನ್ನು ಕಳುಹಿಸಿರುವುದಾಗಿ ತಿಳಿಸಿರುತ್ತಾನೆ.ಈ ಕೋರಿಯರ್‌ನಲ್ಲಿ ಇದ್ದ ವಿದೇಶದ ಮೊತ್ತ ಭಾರತದ ಮೊತ್ತಕ್ಕೆ 37,00,000/- ಹಣ ಆಗುವುದಾಗಿ ಕರೆ ಮಾಡಿ ತಿಳಿಸಿದ್ದಾರೆ.ಇವರಿಬ್ಬರು ಕರೆ ಮಾಡಿ ತಿಳಿಸಿದ್ದರಿಂದ ಅವರ ಮಾತನ್ನು ನಂಬಿ ಒಟ್ಟು 13,99,700/- ಮೊತ್ತವನ್ನು ಅವರು ತಿಳಿಸಿದ ವಿವಿಧ ಖಾತೆಗೆ ಕಳುಹಿಸಿಕೊಟ್ಟಿದ್ದು ಆದರೆ ಅವರು ಕಳುಹಿಸಿದ ಕೋರಿಯರ್‌ ಕೂಡ ಬಂದಿರುವುದಿಲ್ಲ.

ಬಳಿಕ ತಾನು ಮೋಸ ಹೋಗಿರುವುದು ಗೊತ್ತಾದ ಹಿನ್ನಲೆ ಮಹಿಳೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2026 ಕಲಂ: 66(ಡಿ) ಐ ಟಿ ಕಾಯಿದೆ ಮತ್ತು ಕಲಂ: 316(2), 318(4) R/w 3(5) ಬಿಎನ್‌ಎಸ್‌ ರಂತೆ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!