ಟೆಲ್ ಅವೀವ್: ಇರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು, ಇಸ್ರೇಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಇಸ್ರೇಲ್ ದಾಳಿಯ ಹಿನ್ನೆಲೆಯಲ್ಲಿ ಇರಾನ್ ನಾಯಕ ಖೊಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದ್ದು
ಇರಾನ್ ನಲ್ಲಿರುವ ವಿವಿಧ ದೇಶದ ಪ್ರಜೆಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಅಮೆರಿಕಾ ಕೂಡಾ ಸಾಥ್ ನೀಡಿದೆ. ಇಸ್ರೇಲ್ ದಾಳಿಯ ಬಳಿಕ
ಇರಾನ್ ಕೂಡಾ ಇಸ್ರೇಲ್ ಕಡೆಗೆ 30 ರಾಕೆಟ್‌ಗಳನ್ನು ಹಾರಿಸಿದೆ. ಅಲ್ಲದೇ ಇರಾನ್ ಬೆಂಬಲಿತ ಯೆಮೆನ್ ಹೌತಿಗಳು ಕೂಡಾ ಇಸ್ರೇಲ್ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ.
ಇಸ್ರೇಲ್‌ನ ಹೈಫಾ ನಗರದಲ್ಲಿ ಸೈರನ್ ಮೊಳಗಿದ್ದು, ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಈ ಮಧ್ಯೆ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ವಾಯುಪ್ರದೇಶ ಮುಚ್ಚಲ್ಪಟ್ಟಿರುವುದರಿಂದ ದೆಹಲಿ-ಟೆಲ್ ಅವೀವ್ ಮಾರ್ಗದ ಏರ್ ಇಂಡಿಯಾ ವಿಮಾನ ಭಾರತಕ್ಕೆ ವಾಪಸಾಗಿದೆ.


