ಮಂಗಳೂರು; ಅಧಿಕ ಲಾಭದ ಆಸೆಗೆ ಬಿದ್ದು ಮಂಗಳೂರಿನ ವೃದ್ಧರೊಬ್ಬರು 1 ಕೋಟಿಯ 77 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
74 ವರ್ಷ ಪ್ರಾಯದ ವೃದ್ದರಿಗೆ ದಿನಾಂಕ 24-12-2025 ರಂದು ಯಾರೋ ಅಪರಿಚಿತರು +447902527164 ನೇ ನಂಬ್ರದಿಂದ ಕರೆ ಮಾಡಿದ್ದಾರೆ. ಈೂ ವೇಳೆ Shoib ghauri from Ventrade ನಿಂದ ಕರೆ ಮಾಡುವುದಾಗಿ ಹೇಳಿ. ಆನ್ ಲೈನ್ ನಲ್ಲಿ ಅಮೆರಿಕನ್ ಕೊಮೊಡೆಟಿಸ್ ನಲ್ಲಿ ಇನ್ವೆಸ್ಟ್ ಮಾಡಿದರೆ ಅಧಿಕ ಲಾಭ ಬರುವುದಾಗಿ ತಿಳಿಸಿದ್ದಾರೆ. ನೀವು ಭಾರತೀಯ ರುಪಾಯಿಯಲ್ಲಿ ನಮಗೆ ಹಣ ವರ್ಗಾಯಿಸಿದರೆ ನಾವು ಅದನ್ನು ಅಮೇರಿಕನ್ ಡಾಲರ್ ಗೆ ಪರಿವರ್ತಿಸಿ ಇನ್ವೆಸ್ಟಮೆಂಟ್ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ವೃದ್ದರ ಮೊಬೈಲ್ ಗೆ ಈ-ಮೇಲ್([email protected], [email protected]), ವಾಟ್ಸಾಪ್(+447902527164) ಹಾಗೂ ಫೋನ್ ಕರೆಯ(+447441930793, +447441958382) ಮೂಲಕ ಮಾತುಕತೆ ನಡೆಸಿದ್ದಾರೆ. ಅಜ್ಜನಿಗೆ ನಂಬಿಕೆ ಬರಲು ಮೊದಲು ಅಜ್ಜ ಹೂಡಿದ ಹಣಕ್ಕೆ ಲಾಭವನ್ನು ವಂಚಕರು ಕೊಟ್ಟಿದ್ದಾರೆ. ಇದನ್ನು ನಂಬಿದ ಅಜ್ಜ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಅವರು ಹೇಳಿದ್ದನ್ನು ನಂಬಿ ದಿನಾಂಕ 05-01-2026 ರಿಂದ 02-02-2026 ರವರೆಗೆ ಅವರೇ ತಿಳಿಸಿದ ಬ್ಯಾಂಕ್ ಖಾತೆಗಳಿಗೆ RTGS & NEFT& IMPS ಮುಖೇನಾ ಒಟ್ಟು 1,77,64,668.22/- ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿ ಇದೀಗ Shoib ghauri from Ventrade ಎಂಬ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಅಮೆರಿಕನ್ ಕೊಮೊಡೆಟಿಸ್ ನಲ್ಲಿ ಇನ್ ವೆಸ್ಟ್ ಮೆಂಟ್ ಹೆಸರಿನಲ್ಲಿ ಆನ್ ಲೈನ್ ಮೂಲಕ ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


