Thursday, June 4, 2026
Homeಕರಾವಳಿಮಂಗಳೂರುಸುಳ್ಯ : ಅಪ್ರಾಪ್ತ ಯುವತಿ ಗರ್ಭಿಣಿ, ಯುವಕ ಅರೆಸ್ಟ್

ಸುಳ್ಯ : ಅಪ್ರಾಪ್ತ ಯುವತಿ ಗರ್ಭಿಣಿ, ಯುವಕ ಅರೆಸ್ಟ್

- Advertisement -
- Advertisement -

ಸುಳ್ಯ : ಅಪ್ರಾಪ್ತ ಯುವತಿ ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನನ್ನು ಅರೆಸ್ಟ್ ಮಾಡಿರುವ ಘಟನೆ ಐವರ್ನಾಡಿನಲ್ಲಿ ನಡೆದಿದೆ.

ಇಲ್ಲಿ ತೋಟದ ಕೆಲಸಕ್ಕೆಂದು ಝಾರ್ಖಂಡ್ ಮೂಲದ ಯುವಕ ಹಾಗೂ ಯುವತಿ ಬಂದಿದ್ದರು. ಇತ್ತೀಚೆಗೆ ಯುವತಿಗೆ ಜ್ವರ ಬಂದ ಕಾರಣ ಆಕೆ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಯುವತಿ ಗರ್ಭಿಣಿ ಅನ್ನೋದು ಗೊತ್ತಾಗಿದೆ.  ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ

- Advertisement -

Latest News

error: Content is protected !!