- Advertisement -
![]()
- Advertisement -
ಉಡುಪಿ; ಓಮನ್ನ ಉತ್ತರ ಅಲ್ ಬಟಿನಾ ಗವರ್ನರೇಟ್ನ ಲಿವಾ ವಿಲಾಯತ್ನಲ್ಲಿ ಫಎ.9 ರಂದು ಮುಂಜಾನೆ ಸಂಭವಿಸಿ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಉಡುಪಿ ಮೂಲದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಪು ಉಚ್ಚಿಲ ಸಮೀಪದ ಕಲತ್ತೂರು ನಿವಾಸಿ ಚೇತನ್ (26) ಮೃತ ಯುವಕ. ಅಪಘಾತದಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮತ್ತೆ ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಬಳಿಕ ಅವಶೇಷಗಳಲ್ಲಿ ಸಿಲುಕಿದ್ದವರಿಗೆ ರಕ್ಷಣಾ ಸಿಬ್ಬಂದಿ ಸಹಾಯ ಮಾಡಿದ್ದು, ವೈದ್ಯಕೀಯ ತಂಡಗಳು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.
ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರದ ಅಧಿಕಾರಿಗಳು ಈ ಅಪಘಾತದ ಮಾಹಿತಿಯನ್ನು ಮಾಹಿತಿ ಧೃಡಪಡಿಸಿದ್ದಾರೆ.
- Advertisement -


