ಕಾರ್ಕಳ: ಮಗಳ ಅಗಲಿಕೆಯಿಂದ ನೊಂದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಜೆಕಾರು ಕೈಕಂಬದಲ್ಲಿ ನಡೆದಿದೆ. ಕುರುಂಬಿಲ (63) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಕುರುಂಬಿಲ ಅವರ ಮಗಳು ವಸಂತಿ (30) ಕ್ಯಾನ್ಸರ್ ನಿಂದ ಮೃತ ಪಟ್ಟಿದ್ದು, ಇವರ ತಾಯಿ ಕುರುಂಬಿಲ (63) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಸಂತಿ ಸುಮಾರು 6 ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಹಾಸಿಗೆಯಲ್ಲೇ ಮಲಗಿದ್ದರು, ಇತ್ತೀಚಿಗೆ ಆರೋಗ್ಯ ಬಹಳ ಹದಗೆಟ್ಟಿತ್ತು. ಕುರುಂಬಿಲ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದು, ಮರುದಿನ ಬೆಳಗ್ಗೆ ಯಾರು ಮನೆಯಲ್ಲಿ ಕಾಣದೆ ಇದ್ದಾಗ ನೆರೆಮನೆಯ ರೆಹಮತ್ತ ಉಲ್ಲಾರ ರವರು ಕುರುಂಬಿಲು ಅವರ ಅಕ್ಕ ಶಾರದಾ ಅವರನ್ನು ಕರೆದು ಕುರುಂಬಿಲ ಅವರ ಮನೆಯ ಎದುರಿನ ಬಾಗಿಲು ತೆರೆದು ನೋಡಿದ್ದಾರೆ. ಆಗ ಮನೆಯ ಒಳಗಡೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಸಂತಿ
ಕುರುಂಬಿಲರವರ ಇಬ್ಬರು ಮಕ್ಕಳು ಈ ಹಿಂದೆಯೇ ಮೃತಪಟ್ಟಿದ್ದಾರೆ. ಒಬ್ಬಮಗಳೂ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದು ಮಗಳ ಸಾವಿನ ಚಿಂತೆಯಿಂದ ಕುರುಂಬಿಲ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.


