- Advertisement -
![]()
- Advertisement -
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೋ ಮನೆಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಕನ್ನಂಗಾರ್ ಗರೊಡಿ ಬಳಿ ನಡೆದಿದೆ.
ಪಡುಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ವಿಶ್ವ ಟ್ರಾನ್ಸ್ಪೋರ್ಟ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಂಜತೋಟ ಇಸ್ಮಾಯಿಲ್ ಎಂಬವರ ಮನೆಗೆ ಢಿಕ್ಕಿ ಹೊಡೆದಿದೆ. ಮನೆಯ ಮಂದಿ ಕೋಣೆಯಲ್ಲಿದ್ದ ಕಾರಣ ಪವಾಡ ಸದೃಶ್ಯದಿಂದ ಪಾರಾಗಿದ್ದಾರೆ. ಮನೆಗೆ ಭಾಗಶಃ ಹಾನಿಯಾಗಿದೆ.
- Advertisement -


