Friday, June 26, 2026
Homeಅಪರಾಧಬುರುಡೆ ಪ್ರಕರಣ ವರದಿಯ ಆದೇಶ ಮತ್ತೆ ಮುಂದೂಡಿದ ಕೋರ್ಟ್

ಬುರುಡೆ ಪ್ರಕರಣ ವರದಿಯ ಆದೇಶ ಮತ್ತೆ ಮುಂದೂಡಿದ ಕೋರ್ಟ್

- Advertisement -
- Advertisement -

ಬೆಳ್ತಂಗಡಿ : ಬುರುಡೆ ಷಡ್ಯಂತ್ರ ಪ್ರಕರಣ ಬಗ್ಗೆ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಕೋರ್ಟ್ ಗೆ 215 ಅಡಿಯಲ್ಲಿ ವರದಿಯನ್ನು ಸಲ್ಲಿಸಿದ ಆದೇಶವನ್ನು ಡಿ.26 ಕ್ಕೆ ನಿಗದಿಪಡಿಸಲಾಗಿತ್ತು. ಆದ್ರೆ ಆದೇಶವನ್ನು ಡಿ.29 ಕ್ಕೆ ಮುಂದೂಡಿತ್ತು ಇದೀಗ ಮತ್ತೆ ಆದೇಶವನ್ನು ಜ.3 ಕ್ಕೆ ಬೆಳ್ತಂಗಡಿ ನ್ಯಾಯಾಲಯ ಮುಂದೂಡಿದೆ.

ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ನ.20 ರಂದು ‘ಸುಳ್ಳು ಸಾಕ್ಷಿ’ ವರದಿಯನ್ನು (u/s)215 ಅಡಿಯಲ್ಲಿ ಚಿನ್ನಯ್ಯ , ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ, ವಿಠಲ್ ಗೌಡ, ಸುಜಾತ ಭಟ್ ವಿರುದ್ಧ ಸಲ್ಲಿಸಿದ್ದರು.

ಈ ವರದಿಯ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ.ಹೆಚ್.ಟಿ ಅವರು ವಿಚಾರಣೆ ನಡೆಸಿ ಡಿ.26 ರಂದು ಆದೇಶದಿಂದ ಡಿ.29 ಕ್ಕೆ ಮುಂದೂಡಿತ್ತು. ಮತ್ತೆ ಇದೀಗ ಜ.3 ಕ್ಕೆ ಆದೇಶವನ್ನು ಮುಂದೂಡಿದೆ.

ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಡಿವೈಎಸ್ಪಿ ಲೋಕೇಶ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

- Advertisement -

Latest News

error: Content is protected !!