Thursday, June 25, 2026
Homeತಾಜಾ ಸುದ್ದಿವಿಶೇಷಚೇತನರ ರಿಯಾಯಿತಿ ಬಸ್‌ಪಾಸ್ ಅವಧಿ 2 ತಿಂಗಳು ವಿಸ್ತರಣೆ

ವಿಶೇಷಚೇತನರ ರಿಯಾಯಿತಿ ಬಸ್‌ಪಾಸ್ ಅವಧಿ 2 ತಿಂಗಳು ವಿಸ್ತರಣೆ

- Advertisement -
- Advertisement -

ಬೆಂಗಳೂರು: 2025ನೇ ಸಾಲಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿತರಿಸಿರುವ ವಿಶೇಷ ಚೇತನರ ರಿಯಾಯಿತಿ ಬಸ್ ಪಾಸ್‌ಗಳನ್ನು 2026ರ ಫೆಬ್ರವರಿ 28ರವರೆಗೆ ಮಾನ್ಯ ಮಾಡಲಾಗುವುದು‌ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕೆಎಸ್ಆರ್ ಟಿಸಿಯಿಂದ 2026ನೇ ಸಾಲಿನ ವಿಶೇಷ ಚೇತನರ ರಿಯಾಯಿತಿ ಬಸ್ ಪಾಸುಗಳ ವಿತರಣೆ ಮತ್ತು ನವೀಕರಣವನ್ನು ಡಿಸೆಂಬರ್ 30 ರಿಂದ ಪ್ರಾರಂಭಿಸಲಾಗುವುದರಿಂದ ಹಾಲಿ ಬಸ್ ಪಾಸ್ ಗಳನ್ನೇ ಎರಡು ತಿಂಗಳ ಕಾಲ ವಿಸ್ತರಿಸಲಾಗಿದೆ.

ಬಸ್ ಪಾಸ್ ನವೀಕರಣ ಸಂಬಂಧ ಫಲಾನುಭವಿಗಳು ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

- Advertisement -

Latest News

error: Content is protected !!